ರಾಷ್ಟ್ರೀಯ ಸುದ್ದಿ

‘ಆರೆಸ್ಸೆಸ್ ನ ಸಮಸ್ಯೆಯೆಂದರೆ ಅವರಿಗೆ ಭಾರತೀಯ ಸಂವಿಧಾನದ ಮೇಲೆ ನಂಬಿಕೆಯಿಲ್ಲ’: ಭಾಗವತ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ

‘ಜನರನ್ನು ನಾಯಿಗೆ ಹೋಲಿಸುವ ಮತ್ತು ತಮ್ಮನ್ನು ಹುಲಿಗೆ ಹೋಲಿಸಿಕೊಳ್ಳುವಂಥ ಭಯಂಕರವಾದ ಕಲ್ಪನೆಗಳನ್ನು ಆರೆಸ್ಸೆಸ್ ಹೊಂದಿದೆ’

‘ಭಾಗವತ್ ಹೇಳಿಕೆ ಅಚ್ಚರಿ ತಂದಿಲ್ಲ, ಇದು 90 ವರ್ಷಗಳಿಂದ ಆರೆಸ್ಸೆಸ್‍ನ ಭಾಷೆ’

ವರದಿಗಾರ (ಸೆ.09): ಇತ್ತೀಚೆಗೆ ಚಿಕಾಗೊ ಸಮಾರಂಭವೊಂದರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ “ಸಿಂಹ ಏಕಾಂಗಿಯಾಗಿದ್ದರೆ ಕಾಡು ನಾಯಿ ಕೂಡಾ ದಾಳಿ ಮಾಡಿ ಸಿಂಹವನ್ನು ಕೊಲ್ಲಬಲ್ಲದು ಎನ್ನುವುದನ್ನು ನಾವು ಮರೆಯಬಾರದು” ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ,’ಯಾರು ನಾಯಿ ಹಾಗೂ ಯಾರು ಸಿಂಹ?, ಭಾರತೀಯ ಸಂವಿಧಾನ ಪ್ರತಿಯೊಬ್ಬರನ್ನೂ ಮನುಷ್ಯರು ಎಂದು ವ್ಯಾಖ್ಯಾನಿಸಿದೆ. ಯಾರನ್ನೂ ನಾಯಿ ಅಥವಾ ಸಿಂಹವಾಗಿ ಪರಿಗಣಿಸಿಲ್ಲ. ಆರೆಸ್ಸೆಸ್ ನ ಸಮಸ್ಯೆಯೆಂದರೆ ಅವರಿಗೆ ಭಾರತೀಯ ಸಂವಿಧಾನದ ಮೇಲೆ ನಂಬಿಕೆ ಇಲ್ಲ’ ಎಂದು ತೀಕ್ಷವಾಗಿ ತಿರುಗೇಟು ನೀಡಿದ್ದಾರೆ.

“ಜನರನ್ನು ನಾಯಿಗೆ ಹೋಲಿಸುವ ಮತ್ತು ತಮ್ಮನ್ನು ಹುಲಿಗೆ ಹೋಲಿಸಿಕೊಳ್ಳುವಂಥ ಭಯಂಕರವಾದ ಕಲ್ಪನೆಗಳನ್ನು ಆರೆಸ್ಸೆಸ್ ಹೊಂದಿದೆ” ಎಂದು ಉವೈಸಿ ವಾಗ್ದಾಳಿ ನಡೆಸಿದ್ದಾರೆ. ಇದು 90 ವರ್ಷಗಳಿಂದ ಆರೆಸ್ಸೆಸ್‍ನ ಭಾಷೆ. ಭಾಗವತ್ ಹೇಳಿಕೆ ಅಚ್ಚರಿ ತಂದಿಲ್ಲ. ಇಂತಹ ದುಷ್ಟ ಭಾಷೆಯನ್ನು ಭಾರತದ ಜನ ತಿರಸ್ಕರಿಸುತ್ತಾರೆ ಎಂದು ಅಸದುದ್ದೀನ್ ಓವೈಸಿ  ಹೇಳಿದ್ದಾರೆ

To Top
error: Content is protected !!
WhatsApp chat Join our WhatsApp group