ರಾಜ್ಯ ಸುದ್ದಿ

ಖ್ಯಾತ ವ್ಯಂಗ್ಯ ಚಿತ್ರಕಾರ ಪಿ.ಮುಹಮ್ಮದ್ ಗೆ ಗೌರಿ ಲಂಕೇಶ್ ‘ಪೆನ್ ಅವಾರ್ಡ್-2018’

ವರದಿಗಾರ (ಸೆ.08): ಅಂತರ್ರಾಷ್ಟ್ರೀಯ ಪೆನ್ ಸಂಘಟನೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ ಆರಂಭಿಸಿರುವ ‘ಗೌರಿ ಲಂಕೇಶ್ ಪೆನ್ ಅವಾರ್ಡ್-2018’ ಗೆ ಖ್ಯಾತ ವ್ಯಂಗ್ಯ ಚಿತ್ರಕಾರ ಪಿ.ಮುಹಮ್ಮದ್  ಆಯ್ಕೆಯಾಗಿದ್ದಾರೆ.

ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಮುಂದುವರಿಕೆಯಲ್ಲಿ ಅನುಕರಣೀಯ ಬದ್ಧತೆಯನ್ನು ತೋರಿರುವ ಮುಹಮ್ಮದ್ ಚೊಚ್ಚಲ ‘ಪ್ರಜಾಪ್ರಭುತ್ವದ ಆದರ್ಶವಾದ ಗೌರಿ ಲಂಕೇಶ್ ಪುರಸ್ಕಾರ’ವನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೆಪ್ಟೆಂಬರ್ 5 ರಂದು ನಡೆದ ಗೌರಿ ದಿನ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗಿದೆ.

ಪುರಸ್ಕಾರವು 1 ಲಕ್ಷ ರೂ. ನಗದು ಬಹುಮಾನವನ್ನು ಹೊಂದಿದ್ದು ಭಾರತದಲ್ಲಿ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ದೃಢ ಮನೋಭಾವ ಮತ್ತು ಧೈರ್ಯ ತೋರುವ ವ್ಯಕ್ತಿಗಳು ಅಥವಾ ಸಂಘಟನೆಗಳಿಗೆ ವಾರ್ಷಿಕವಾಗಿ ನೀಡಲಾಗುವುದು ಎಂದು ‘ಪೆನ್’ ದಿಲ್ಲಿ ಹಾಗೂ ‘ಪೆನ್’ ದಕ್ಷಿಣ ಭಾರತ ಈ ಸಂದರ್ಭದಲ್ಲಿ ಹೇಳಿದೆ.

ಪೆನ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪಿ ಮುಹಮ್ಮದ್ ಪ್ರತಿಕ್ರಿಯಿಸಿದ್ದು, ‘ಈ ಪ್ರಶಸ್ತಿ ಕೊಟ್ಟಿರುವುದು ನಾನು ಈ ತನಕ ಮಾಡಿರುವ ಕೆಲಸಕ್ಕಲ್ಲ, ಇನ್ನು ಮುಂದೆ ಮಾಡಬೇಕಾಗಿರುವುದಕ್ಕಾಗಿ ಎಂದು ಕೊಂಡು ಪೆನ್ ಸಂಸ್ಥೆಗೆ ಕೃತಜ್ಞತೆಯನ್ನು ಹೇಳುತ್ತೇನೆ’ ಎಂದು ಹೇಳಿದ್ದಾರೆ.

ಪಿ ಮುಹಮ್ಮದ್ ರವರ ಇತ್ತೀಚೆಗಿನ ಕೆಲವೊಂದು ಕಾರ್ಟೂನುಗಳು

 

To Top
error: Content is protected !!
WhatsApp chat Join our WhatsApp group