ಜಿಲ್ಲಾ ಸುದ್ದಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರ್ಣಾಯಕ ಶಕ್ತಿಯಾಗುವತ್ತ ಎಸ್ ಡಿ ಪಿ ಐ ?

ವರದಿಗಾರ (ಆ 30)  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯು ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು, ಸ್ಥಳೀಯವಾಗಿ ಜನರೊಂದಿಗೆ ಗುರುತಿಸಿಕೊಂಡೀರುವ ಎಸ್ಡಿಪಿಐ ಪಕ್ಷವು ಈ ಬಾರಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಾ ಒಂದು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆಯೆನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಅಭ್ಯರ್ಥಿಗಳು ಉಳ್ಳಾಲ ನಗರಸಭೆಯ 9 ಸ್ಥಾನಗಳಿಗೆ, ಪುತ್ತೂರು ನಗರ ಸಭೆಯ 3 ಮತ್ತು ಬಂಟ್ವಾಳ ಪುರಸಭೆಯಲ್ಲಿ 12 ಸ್ಥಾನಗಳಲ್ಲಿ ಸ್ಪರ್ದಿಸುತ್ತಿದ್ದು,  ಕಣದಲ್ಲಿರುವ ಎಲ್ಲ ಪಕ್ಷಗಳಿಗೆ ಪೈಪೋಟಿ ಕೊಡುವುದರ ಮೂಲಕ ಮೂರು ಕಡೆಯಲ್ಲಿಯೂ ನಿರ್ಣಾಯಕ ಶಕ್ತಿಯಾಗಿ ಹೊರ ಹೊಮ್ಮುವ ಕುರಿತು ಪಕ್ಷದ ಜಿಲ್ಲಾ ನಾಯಕರು ತುಂಬು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ಅಕ್ರಮ, ಅನ್ಯಾಯ ಮತ್ತೆ ತಾರತಮ್ಯ ನೀತಿಯಿಂದ ಬೇಸತ್ತು ವಾರ್ಡಿನ ಎಲ್ಲಾ  ಜನರು ಬದಲಾವಣೆಯ ಹುಮ್ಮಸಿನಲ್ಲಿದ್ದು, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮತ್ತು  ಅಭಿವೃದ್ಧಿ ಪರ ಪಕ್ಷದ ಕೈ ಹಿಡಿಯುವ ವಿಶ್ವಾಸವನ್ನು ಎಸ್ಡಿಪಿಐ ನಾಯಕರು ವ್ಯಕ್ತಪಡಿಸುತ್ತಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕುರಿತು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರು, ‘ಪಕ್ಷದ ಕಾರ್ಯಕರ್ತರು, ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಎಲ್ಲಾ ವಾರ್ಡುಗಳಲ್ಲಿ ಕಳೆದ ಹಲವು ವರ್ಷಗಳಿಂದ ಜನಪರ ಹೋರಾಟ ನಡೆಸುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕಾರಣದಿಂದ ನಮ್ಮ ಗೆಲುವು ಬಹಳ ಸುಲಭವಾಗಿದೆ ಇದರಿಂದ ಜಿಲ್ಲೆಯ ಎಲ್ಲಾ ಮೂರು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ SDPI ಪಕ್ಷವು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲಿದೆ ಮಾತ್ರವಲ್ಲ ಬಂಟ್ವಾಳದಲ್ಲಿ ಸ್ಪರ್ಧಿಸಿರುವ 12ರಲ್ಲಿ 10 ಸ್ಥಾನಗಳನ್ನು, ಉಳ್ಳಾಲದಲ್ಲಿ 7 ಸ್ಥಾನಗಳಲ್ಲಿ ಹಾಗೂ ಪುತ್ತೂರಿನಲ್ಲಿ ಎರಡು ಸ್ಥಾನಗಳಲ್ಲಿ ಜಯಗಳಿಸುವ ಸಂಪೂರ್ಣ ವಿಶ್ವಾಸವಿದೆ’‘ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನಗರ ಪಾಲಿಕೆ, ನಗರ ಸಭೆ ಮತ್ತು ಪುರಸಭೆಗಳಲ್ಲಿ ಇದೀಗಾಗಲೇ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿರುವ ಎಸ್ ಡಿ ಪಿ ಐ ಪಕ್ಷಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 27 ಸದಸ್ಯರು ಚುನಾಯಿತರಾಗಿ ಗೆದ್ದು ಬಂದಿದ್ದಾರೆ. ಕಳೆದ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೂಡಾ ಗಮನೀಯ ಸಾಧನೆಗೈದಿರುವ ಎಸ್ ಡಿ ಪಿ ಐ,  ಜಿಲ್ಲೆಯಲ್ಲಿ ಒಟ್ಟು 81 ಸ್ಥಾನಗಳಲ್ಲಿ ಗೆದ್ದುಕೊಂಡಿತ್ತು. ಇದೀಗ ಮತ್ತೊಮ್ಮೆ ತಮ್ಮ ಪಕ್ಷದ ಕಾರ್ಯಕರ್ತರ ಸೇವೆಯನ್ನು ಮುಂದಿಟ್ಟುಕೊಂಡು, ಭ್ರಷ್ಟಾಚಾರ ಮುಕ್ತ ಮತ್ತು ಅಭಿವೃದ್ಧಿ ಪರ ಎಂಬ ಧ್ಯೇಯದೊಂದಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group