ರಾಷ್ಟ್ರೀಯ ಸುದ್ದಿ

ಪ್ರವಾಹ ಪೀಡಿತ ಕೇರಳಕ್ಕೆ ಬಿಜೆಪಿ ಸಂಸದರು 25 ಕೋಟಿ ನೀಡಿದ್ದಾರೆಂಬ ಸುಳ್ಳು ಸುದ್ದಿಯ ಸತ್ಯಾಸತ್ಯತೆ !

ಜನರ ಸಂಕಷ್ಟಗಳ ನಡುವೆಯೂ ರಾಜಕೀಯ ಬೇಳೆ ಬೇಯಿಸಿದವರ ನೈಜ ಮುಖದರ್ಶನ

ಮತ್ತೊಮ್ಮೆ ನಗೆಪಾಟಲಿಗೀಡಾದ ಬಿಜೆಪಿಯ ಸಾಮಾಜಿಕ ತಾಣದ ‘ವೀರ’ ರು !

ವರದಿಗಾರ (ಆ.28): ಇತಿಹಾಸದಲ್ಲೇ ಕಂಡರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೇರಳಕ್ಕೆ ಬಿಜೆಪಿಯ ಸಂಸದರು ಮತ್ತು ಸಚಿವರು 25 ಕೋಟಿ ರೂಪಾಯಿ ಮೊತ್ತವನ್ನು ಪರಿಹಾರವಾಗಿ ನೀಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಅಲ್ಟ್ ನ್ಯೂಸ್ ಬಹಿರಂಗಗೊಳಿಸಿದೆ.

25 ಕೋಟಿ ರೂಪಾಯಿ ಪರಿಹಾರವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನೀಡಿದ್ದು, ತೈಲ ಕಂಪೆನಿಗಳು ನೀಡಿದ್ದ ಚೆಕ್ ಹಸ್ತಾಂತರದ ಸಂದರ್ಭದಲ್ಲಿ ಬಿಜೆಪಿ ನಾಯಕರು ಜೊತೆಗಿರುವುದನ್ನು ಬಳಸಿಕೊಂಡು ‘ಬಿಜೆಪಿಯ ಜನಪ್ರತಿನಿಧಿಗಳು ಕೇರಳಕ್ಕೆ ದೇಣಿಗೆ ನೀಡಿದ್ದಾರೆ’ ಎಂಬ ಸುಳ್ಳು ಸುದ್ದಿಯನ್ನು ಹರಡಿ ಮತ್ತೊಮ್ಮೆ ನಗೆಪಾಟಲೀಗೀಡಾಗಿದೆ.

‘ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ ದೇಣಿಗೆ ನೀಡಿದ್ದಾರೆ. ನಾವೇನೂ ಸ್ವೀಕರಿಸಿಲ್ಲ ಅಂತ ಹೇಳಬೇಡಿ’. ಎಂಬ ತಲೆಬರಹದಲ್ಲಿ ಸಂದೇಶ ಶ್ರೀಕುಮಾರ್ ಶ್ರೀಧರನ್‌ನಾಯರ್ ಎಂಬುವವರ ಫೇಸ್‌ಬುಕ್ ಖಾತೆಯಲ್ಲಿ ಸುಳ್ಳು ಸುದ್ದಿಯನ್ನು ಹರಡಲಾಗಿತ್ತು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 25 ಕೋಟಿ ಮೊತ್ತದ ಚೆಕ್ ಸ್ವೀಕರಿಸುತ್ತಿರುವ ಫೋಟೊವೂ ಸಂದೇಶದ ಜತೆಗಿದೆ. ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ, ಬಿಜೆಪಿ ಸಂಸದ ವಿ. ಮುರಳೀಧರನ್ ಸಹ ಚಿತ್ರದಲ್ಲಿದ್ದಾರೆ. ಈ ಸಂದೇಶವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದು ಬಿಜೆಪಿಯು ಕೇರಳ ಪ್ರವಾಹ ಪೀಡಿತರಿಗೆ ದೇಣಿಗೆ ನೀಡಿದೆ ಎಂದು ವಾದಿಸತೊಡಗಿದ್ದಾರೆ.

ಜನರ ಸಂಕಷ್ಟಗಳ ನಡುವೆಯೂ ರಾಜಕೀಯ ಬೇಳೆ ಬೇಯಿಸಿದವರ ನೈಜ ಮುಖದರ್ಶನವನ್ನು ಮಾಡಿದೆ ಎಂಬುವುದು ಸತ್ಯ.

ದೇಣಿಗೆ ನೀಡಿದ ಬಗ್ಗೆ ಬಿಜೆಪಿ ಸಂಸದ ಮುರಳೀಧರನ್  ಟ್ವೀಟ್ ಮಾಡಿದ್ದು, ತೈಲ ಮಾರುಕಟ್ಟೆ ಕಂಪೆನಿಗಳ ಪರವಾಗಿ ಚೆಕ್ ಹಸ್ತಾಂತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

To Top
error: Content is protected !!
WhatsApp chat Join our WhatsApp group