ವಿದೇಶ ಸುದ್ದಿ

ಇಂಡಿಯನ್ ಫ್ರಾಟರ್ನಿಟಿ ಫೋರಮ್ (IFF ) ನ 1500 ಹಜ್ ಸ್ವಯಂ ಸೇವಕರು ಹಜ್ಜಾಜಿಗಳ ಸೇವೆಗಯ್ಯಲು ಕೊನೆಯ ಹಂತದ ಸಿದ್ದತೆಯಲ್ಲಿ

ವರದಿಗಾರ (ಆ 21) :  ಸೌದಿ ಸರಕಾರದ ಅಧೀನ ಸಂಸ್ಥೆಯಾದ ಮಾರಾಕಿಝ್ ಅಲ್ ಅಹ್ಯಾ ಜೊತೆಗೂಡಿ ಇಂಡಿಯನ್ ಫ್ರಾಟರ್ನಿಟಿ ಫೋರಮ್ ಹಜ್ಜಾಜಿಗಳ ಸೇವೆಗಯ್ಯಲು ಸುಮಾರು 1500 ಸ್ವಯಂ ಸೇವಕರ ತಂಡದೊಂದಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ 1500 ಸ್ವಯಂ ಸೇವಕರು ನಾನಾ ಭಾಷೆ ಮಾತನಾಡುವವರಾಗಿದ್ದು ಹಜ್ಜಾಜಿಗಳು ಕೂಡ ಬೇರೆ ಬೇರೆ ಮಾತೃ ಭಾಷೆಯವರಾದದ್ದರಿಂದ ಸ್ವಯಂ ಸೇವಕರಿಗೆ ಇವರೊಂದಿಗೆ ವ್ಯವಹರಿಸುವ ಸಲುವಾಗಿ ಉತ್ಕ್ರಷ್ಟ ಮಟ್ಟದ ತರಬೇತಿ ನೀಡಲಾಗಿದೆ.IFF ಸ್ವಯಂಸೇವಕರು ಭಾರತದಿಂದ ಬಂದ ಮೊದಲ ಹಜ್ ತಂಡದಿಂದ ಹಿಡಿದು ಇಲ್ಲಿಗೆ ಆಗಮಿಸುವ ಪ್ರತಿ ತಂಡದೊಂದಿಗೆ ಮಕ್ಕ ಮದೀನಾ ಮುಂತಾದ ಪವಿತ್ರ ಸ್ಥಳಗಲ್ಲಿ ಜೊತೆಯಾಗಿ ಇಲ್ಲಿಂದ ಸ್ವದೇಶಕ್ಕೆ ಮರಳುವವರೆಗೂ ಜೊತೆಯಾಗಿರುತ್ತವೆ. ಭಾರತೀಯ ಹಜ್ ಮಿಷನ್ ವಿನಂತಿಯ ಪ್ರಕಾರ ಈ ತಂಡವು ಹರಮ್ ಶರೀಫಿನಲ್ಲಿ 24 ಗಂಟೆಯೂ 4 ತಂಡವಾಗಿ ತನ್ನ ಕಾರ್ಯಾಚರಣೆಯಲ್ಲಿ IFF ತೊಡಗಿಸಿಕೊಂಡಿದೆ. ಈ ತಂಡವು 150 ಸದಸ್ಯರನ್ನೊಳಗೊಂಡು ಸುಮಾರು 45 ದಿನಗಳವರೆಗೆ ತನ್ನ ಸೇವೆ ನೀಡುತ್ತಿದೆ. ಮಿಸ್ಬಾ ಜಿನ್ನ್ ಬಸ್ ನಿಲ್ದಾಣದ ಮೂಲಕ ಹಾದು ಹೋಗುವ ಸುಮಾರು 80,000 ಭಾರತೀಯ ಹಜ್ ಯಾತ್ರಾರ್ಥಿಗಳ ಜವಾಬ್ದಾರಿಯನ್ನು ಹಜ್ ಕಮಿಷನ್ IFF ಗೆ ನೀಡಿದೆ .ಇದರ ಹೊರತಾಗಿ ಬೇರೆ ಬಸ್ ನಿಲ್ದಾಣಗಳಲ್ಲಿಯೂ ಕೂಡ ತನ್ನ ಸೇವೆ ನೀಡುತ್ತಿದೆ.

 

ಪ್ರಸಕ್ತ ವರ್ಷದಲ್ಲಿ ಮರ್ಹಮ್ ಗಳಿಲ್ಲದೆ ಬರುವ ಮಹಿಳಾ ಹಜ್ ಯಾತ್ರಾರ್ಥಿಗಳ ಸೇವೆಗೆ IFF ಮಹಿಳಾ ತಂಡವು ಹಜ್ ಮಿಷನ್ ನ ವಿಶೇಷ ನಿರ್ದೇಶನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹಜ್ ಮಿಷನ್ ತಂಡದ 2 ಕ್ಲಿನಿಕ್ ಗಳೊಂದಿಗೆ ಈ ಮಹಿಳಾ ತಂಡವು ನರ್ಸ್ ಗಳನ್ನೂ ಒಳಗೊಂಡಿದೆ.ಇಂಡಿಯನ್ ಮೆಡಿಕಲ್ ವಿಂಗ್ ಜೊತೆ ಸಹಯೋಗದೊಂದಿಗೆ ಈ ಹಜ್ ಸೇವೆ ಕಾರ್ಯನಿರ್ವಹಿಸುತ್ತಿದೆ.

ಮಿನಾ ಮುಝ್ದಲಿಫಾ ಮತ್ತು ಅರಫಾದಲ್ಲಿ ನಾನಾ ಬಾಷೆ ಮಾತನಾಡುವ ಸ್ವಯಂಸೇವಕರ ತಂಡವನ್ನು ವಿಂಗಡಿಸಿ ವಿವಿಧ ಆಸ್ಪತ್ರೆಗಳಲ್ಲಿ ಸೌದಿ ಮಿನಿಸ್ಟ್ರಿ ಆಫ್ ಹೆಲ್ತ್ ಮತ್ತು ಮಾರಾಕಿಝ್ ಅಲ್ ಅಹ್ಯಾ ಇದರ ವಿನಂತಿಯ ಮೇರೆಗೆ ನಿಯೋಜಿಸಲಾಗಿದೆ. ಹಜ್ ಮಿಷನ್ ಸಂಸ್ಥೆಯ ಆಂಬುಲೆನ್ಸ್ ಸಹಾಯದೊಂದಿಗೆ ಹಜ್ ಕರ್ಮದ ಕೊನೆಯ ದಿನ ಪ್ರತೀ ಕ್ಯಾಂಪ್’ಗಳ ತಪಾಸಣೆಯನ್ನು ಹಾಗು ಅದರಲ್ಲಿ ಬಾಕಿಯಾದವರ ಸಂಪೂರ್ಣ ಜವಾಬ್ದಾರಿ ಈ ತಂಡ ವಹಿಸಿಕೊಂಡಿದೆ. ಈ ಅನ್ವೇಷಣಾ ತಂಡ ಮುಝ್ದಲಿಫಾದಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ.ಈ ಅನ್ವೇಷಣಾ ತಂಡವು ಕಾನ್ಸುಲರ್ ಜನರಲ್ ರವರ ವಿಶೇಷ ವಿನಂತಿಯ ಮೇರೆಗೆ ದುಲ್ಹಜ್ 13 ರಂದು ಮಿನಾನಗರದ ಪ್ರತಿ ಕ್ಯಾಂಪ್ ಗಳಲ್ಲಿ  ಅನ್ವೇಷಿಸಿ ಬಾಕಿಯಾದ ಭಾರತೀಯ ಯಾತ್ರಾರ್ಥಿಗಳ ಸೇವೆಯನ್ನು ಮಾಡುತ್ತದೆ.

ಸುಮಾರು 250 ಕ್ಕೂ ಹೆಚ್ಚಿನ ಸ್ವಯಂಸೇವಕರು ಅರಫಾ ಮೈದಾನದ ಸುತ್ತಲಿನ ಪ್ರದೇಶಗಳಲ್ಲಿ ತಮ್ಮ ಸೇವೆ ನೀಡುತ್ತಲಿದ್ದಾರೆ. ಕೆಲವೊಂದು ಅನುಭವಿ ಸ್ವಯಂ ಸೇವಕರನ್ನು ಮಷಾಯಿರ್ ಮೆಟ್ರೋ ಸ್ಟೇಷನ್ ಬಳಿ ನಿಯೋಜಿಸಲಾಗಿದೆ. ಪುಣ್ಯ ಮದೀನಾದಲ್ಲಿ ಹಜ್ ವಾಲಂಟಿಯರ್ ಫಾರಂ ನ ಬ್ಯಾನರ್ ಅಡಿಯಲ್ಲಿ ಯಾತ್ರಾರ್ಥಿ ಹಜ್ಜಾಜಿಗಳು ಪವಿತ್ರ ನಗರದಿಂದ ಹೋಗುವಲ್ಲಿನ ವರೆಗೆ ತಮ್ಮ ಸೇವೆ ನೀಡಲಿದ್ದಾರೆ.

 

ಹಜ್ ಯಾತ್ರಾರ್ಥಿಗಳು ತಮ್ಮ ಸ್ಥಳವನ್ನು ಗುರುತಿಸುವ ಸಲುವಾಗಿ ಅವರಿಗೆ ಅತ್ಯಾಧುನಿಕ ನೇವಿಗೇಟರ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನೂ ನೀಡಲಾಗಿದೆ. ಈ ಅಪ್ಲಿಕೇಶನ್ ಮೂಲಕ ಯಾತ್ರಾರ್ಥಿಗಳು ಸುಲಭವಾಗಿ ತಾವು ಹೊರಟ ಸ್ಥಳಗಳಿಂದ ಮುಟ್ಟಬೇಕಾದಲ್ಲಿನ ಸ್ಥಳಗಳ ಮಾರ್ಗವನ್ನು ಬಹುಸುಲಭವಾಗಿ ಕಂಡುಹಿಡಿಯಬಹುದಾಗಿದೆ ಹಾಗೂ ಅನೇಕ ಸ್ಥಳಗಳ ಮಾಹಿತಿ ಕೂಡ ಈ ಅಪ್ಲಿಕೇಶನ್ ನಲ್ಲಿ ಆನ್ ಲೈನ್ ಹಾಗು ಆಫ್ ಲೈನ್ ಮೂಲಕನೂ ಕಂಡು ಹಿಡಿಯುವಂತೆ ಒದಗಿಸಲಾಗಿದೆ. ಈ ಬಾರಿ ಹಜ್ ಯಾತ್ರಾರ್ಥಿಗಳಿಗೆ ತಮ್ಮ ತಮ್ಮ ಮುತಾವಿಫ್ ಸಂಖ್ಯೆ ಗಳನ್ನೂ ನೀಡಿ ನೇರವಾಗಿ ಮಿನ ಮುಜ್ದಲಿಫಾ ಮತ್ತು ಅರಫಾದಲ್ಲಿರುವ ತಮ್ಮ ತಮ್ಮ ಕ್ಯಾಂಪ್ ಗಳಿಗೆ ಮುಟ್ಟುವಂತಹ ಸುಲಭ ಮಾರ್ಗ ಈ ಆಪ್ ಮೂಲಕ ನೀಡಲಾಗಿದೆ ಹಾಗೂ ಕಳೆದ ವರ್ಷದಂತೆ ಪವಿತ್ರ ಮಕ್ಕ ಮತ್ತು ಅಝೀಝಿಯಾದ ನಕಾಶೆಯನ್ನು ಹಜ್ಜಾಜಿಗಳಿಗೆ ವಿತರಿಸಲಾಗಿದೆ. ಹೆಲ್ಪ್ ಡೆಸ್ಕ್ ಮುಖ್ಯವಾಗಿ ಬಹುತೇಕ  ಎಲ್ಲಾ ಬಾಷೆಯಲ್ಲಿ ನೈಪುಣ್ಯತೆ ಹೊಂದಿರುವ ಸುಮಾರು 10 ಜನರ ತಂಡವು ಮಕ್ಕಾದ ಸುತ್ತಮುತ್ತಲು ದಿನದ 24 ಗಂಟೆಯೂ ಸೇವೆ ನೀಡಲಿದೆ.

IFF ಸಾವಿರಾರು ಹಜ್ ಯಾತ್ರಾರ್ಥಿಗಳಿಗೆ ತಮಿಳುನಾಡು ಮತ್ತು ಕೇರಳದಾದ್ಯಂತ ಮಾಹಿತಿ ಹಾಗು ತರಬೇತಿ ಕ್ಯಾಂಪುಗಳನ್ನು ನಡೆಸಿದೆ. ಹಜ್ಜಾಜಿಗಳ ಅನುಕೂಲಕ್ಕಾಗಿ ಅವರು ಅಲ್ಲಿ ಮಾಡಬೇಕಾದ ಪುಣ್ಯ ಕರ್ಮಗಳ ಬಗ್ಗೆ ಹಾಗು ಅಲ್ಲಿನ ಸ್ಥಳಗಳ ಪರಿಚಯವನ್ನು  ಯಾತ್ರಾರ್ಥಿಗಳು ಸೌದಿ ಅರೇಬಿಯಾಗೆ ಬಂದಿಳಿದು ಮತ್ತೆ ತಾಯ್ನಾಡು ಪ್ರವೇಶಿಸುವ ವರೆಗಿನ ಮಾಹಿತಿಯನ್ನು  ಪ್ರಾಯೋಗಿಕವಾಗಿ ನೀಡಿದೆ. ಈ ಎಲ್ಲಾ IFF ಸೇವೆಗಳ ಸಂಪೂರ್ಣ ನಾಯಕತ್ವಬನ್ನು  ಫಾಯಿಝುದ್ದೀನ್ ( IFF ವಲಯ ಅಧ್ಯಕ್ಷ) ಮೊಹಮ್ಮದ್ ಸಾದಿಕ್ ( ಹಜ್ ಕೋ ಆರ್ಡಿನೇಟರ್) ಮುದಸ್ಸಿರ್ ಮಂಗಳೂರು ( ವಾಲಂಟಿಯರ್ ಕ್ಯಾಪ್ಟನ್ ) ವಾಸೀಮ್ ಚೆನ್ನೈ ( ಮೀಡಿಯಾ ಇನ್ ಚಾರ್ಜ್) ಅಬ್ದುಲ್ ಕೋಯಾ , ಅಬ್ದುಲ್ ಗಫ್ಫರ್ ( ಮಕ್ಕ ಕೋ ಆರ್ಡಿನೇಟರ್ ) ಇವರುಗಳಿಗೆ ನೀಡಲಾಗಿದೆ. ಈ ಎಲ್ಲಾ ಮಾಹಿತಿಗಳನ್ನು ಇಂದು ನಡೆದ  ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದಂತಹ ಅಬ್ದುಲ್ ರವೂಫ್ ಚೇರೂರ್ , ಮುದಸ್ಸಿರ್ ಮಂಗಳೂರು , ವಾಸೀಮ್ ಚೆನ್ನೈ , ನೌಶಾದ್ ಚೇರಾಯಿನ್ಕೀಝ್ (IFF  ಕೇರಳ ಅಧ್ಯಕ್ಷರು ) ಸಯ್ಯದ್ ಅಲಿ (IFF ಉತ್ತರ ಭಾರತ ರಾಜ್ಯಗಳ ಅಧ್ಯಕ್ಷರು ) ನೀಡಿದರು.

To Top
error: Content is protected !!
WhatsApp chat Join our WhatsApp group