ಸಾಮಾಜಿಕ ತಾಣ

‘ನಾನು ಕೇರಳದ ಪ್ರವಾಹ ಸಂತ್ರಸ್ತರ ಜೊತೆಗಿದ್ದೇನೆ’: ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಮುಂದಾದ ಅಫ್ಘಾನ್ ಕ್ರಿಕೆಟಿಗ

ವರದಿಗಾರ (ಆ.21): ಇತಿಹಾಸದಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿ ಅಪಾರ ಪ್ರಾಣ ಹಾನಿಯಾಗಿರುವ, ಆಸ್ತಿಯನ್ನು ಕಳೆದುಕೊಂಡು ನಿಮ್ಮೆಲ್ಲರ ಸಹಾಯಕ್ಕಾಗಿ ಮುಂದೆ ನೋಡುತ್ತಿರುವ ಕೇರಳಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನ ಪ್ರಸಿದ್ಧ ಬೌಲರ್, ಅಫ್ಘಾನಿಸ್ತಾನದ ರಶೀದ್ ಖಾನ್ ಕೈಜೋಡಿಸಿದ್ದಾರೆ.

“ಸಂಪೂರ್ಣ ಕೇರಳವೇ ಸಂಕಷ್ಟದಲ್ಲಿರುವುದು ನಿಮಗೆಲ್ಲರಿಗೂ ತಿಳಿದಿದೆ. ಕೇರಳವನ್ನು ಮರುಸ್ಥಾಪಿಸಲು ಮುಂದಾಗಿರುವ ಕೇರಳ ಕ್ರಿಕೆಟ್ ಅಸೋಸಿಯೇಶನ್ ಜೊತೆ ಕೈಜೋಡಿಸಬೇಕು ಹಾಗು ಕೊಡುಗೆ ಸಲ್ಲಿಸಬೇಕು. ನಾನೂ ಕೇರಳದ ಪ್ರವಾಹ ಸಂತ್ರಸ್ತರ ಜೊತೆಗಿದ್ದೇನೆ” ಎಂದು ರಶೀದ್ ಖಾನ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group