ಸಾಮಾಜಿಕ ತಾಣ

ಕೇರಳದ ಪ್ರವಾಹ ಪೀಡಿತ ಹಾಸ್ಟೆಲ್ ವಿದ್ಯಾರ್ಥಿನಿಗಳಿಗೆ ಕಾಂಡೋಂ ಬೇಕಾ ಎಂದು ಕೇಳಿದ ‘ಕೇಸರಿ ಪ್ರೇಮಿ’ ಕೆಲಸದಿಂದ ಕಿಕ್ ಔಟ್ !

► ಪ್ರವಾಹ ಪೀಡಿತರಿಗೆ ನ್ಯಾಪ್ಕಿನ್ ಅವಶ್ಯಕತೆಯಿದೆ ಎಂದವರಿಗೆ ಕಾಂಡೋಮ್ ಕಳಿಸಲಾ ಎಂದು ಕೇಳಿದ ಭೂಪ !

ವರದಿಗಾರ (ಆ 20) :  ಕೇರಳದ ಇತಿಹಾಸ ಕಂಡು ಕೇಳರಿಯದ ಭೀಕರ ಜಲಪ್ರಳಯಕ್ಕೆ ಇಡೀ ವಿಶ್ವವೇ ಮರುಗುತ್ತಿದೆ ಮತ್ತು ಸಹಾಯಹಸ್ತ ಚಾಚುತ್ತಿವೆ. ಆದರೆ  ಇದೇ ವೇಳೆ ಇಲ್ಲಿನ ಕೆಲ ದುಷ್ಟ ಮನೋಸ್ಥಿತಿಗಳು ವಿವಿಧ ರೂಪಗಳಲ್ಲಿ ಸಾಮಾಜಿಕ ತಾಣಗಳಲ್ಲಿ ತಮ್ಮ ವಿಕೃತಿ ಮೆರೆಯುತ್ತಿದ್ದಾರೆ. ಕೆಲವೊಬ್ಬರು ಇದು ಶಬರಿಮಲೆಗೆ ಸ್ತ್ರೀ ಪ್ರವೇಶದ ಸುಪ್ರೀಮ್ ಕೋರ್ಟಿನ ತೀರ್ಪಿಗೆ ದೇವರ ಉತ್ತರ ಎಂದರೆ, ಇನ್ನು ಕೆಲವರು ಕೇರಳ ‘ಹಿಂದೂ ವಿರೋಧಿ’ ನೆಲ ಎಂಬ ಹಣೆಪಟ್ಟಿಯನ್ನು ಬಿಟ್ಟಿಯಾಗಿ ಕೊಟ್ಟಿದ್ದಾರೆ. ಆದರೆ ಇವೆಲ್ಲವನ್ನೂ ಮೀರಿಸುವಂತೆ ಸಾಮಾಜಿಕ ತಾಣ ಫೇಸ್ಬುಕ್ಕಿನಲ್ಲಿ ‘ಕೇಸರಿ ಪ್ರೇಮಿ’ ಎಂದು ತನ್ನನ್ನು ತಾನು ಪರಿಚಯಿಸಿಕೊಂಡ ದುಷ್ಕರ್ಮಿಯೊಬ್ಬ,  ನೆರೆಯಿಂದಾಗಿ ಮಹಿಳಾ ಹಾಸ್ಟೆಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿನಿಗಳಿಗೆ ಅವಶ್ಯಕ ನ್ಯಾಪ್ಕಿನ್ ಗಳು ಬೇಕಾಗಿದೆ ಎಂಬ ಸಂದೇಶವನ್ನು ಹಾಕಿದ ಸಹೃದಯಿಯೊಬ್ಬರ ಪೋಸ್ಟಿಗೆ “ಸ್ವಲ್ಪ ಕಾಂಡೋಮ್’ಗಳನ್ನು ಕೂಡಾ ಕಳಿಸಲಾ?” ಎಂದು ಕೇಳಿ ತನ್ನ ವಿಕೃತಿ ಮೆರೆದಿದ್ದಾನೆ. ಒಮಾನಿನ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತನ ಕೃತ್ಯಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ ಕಂಪನಿ, ಈತನನ್ನು ಕೆಲಸದಿಂದ ತೆಗೆದು ಹಾಕಿದೆ.

ಪ್ರತಿಷ್ಟಿತ ‘ಲುಲು ಗ್ರೂಪ್’ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ರಾಹುಲ್ ಪುತ್ತಲತ್ತು ಎನ್ನುವವನೇ ಈ ವಿಕೃತಿ ಮೆರೆದ ವ್ಯಕ್ತಿ. ಸಾಮಾಜಿಕ ತಾಣಗಳಲ್ಲಿ ಈತನ ಕಮೆಂಟಿನ ವಿರುದ್ಧ ಬೃಹತ್ ಪ್ರಮಾಣದಲ್ಲಿ ವಿರೋಧಗಳು ಕಂಡು ಬಂದವು. ಆತನನ್ನು ಕೆಲಸದಿಂದ ತೆಗೆದು ಹಾಕುವಂತೆ ಒತ್ತಾಯಿಸಲಾಗಿತ್ತು. ಇದಕ್ಕೆ ಧನಾತ್ಮಕವಾಗಿ ಸಂವೇದನಾಶೀಲರಾಗಿ ಪ್ರತಿಕ್ರಿಯಿಸಿದ ಲುಲು ಗ್ರೂಪ್ ಅಧಿಕಾರಿಗಳು, ರಾಹುಲ್ ನನ್ನು ಕೆಲಸದಿಂದ ವಜಾಗೊಳಿಸಿದ ಪತ್ರವನ್ನು ಸಾಮಾಜಿಕ ತಾಣದಲ್ಲೇ ಬಿಡುಗಡೆಗೊಳಿಸಿದರು.

ಕೇರಳದ ದೂರದ ಪ್ರದೇಶವೊಂದರ ಮಹಿಳಾ ಹಾಸ್ಟೆಲಿನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿನಿಗಳಿಗೆ ನ್ಯಾಪ್ಕಿನ್ ಗಳು ಬೇಕಾಗಿ ಬರಬಹುದು. ಆದ್ದರಿಂದ ನ್ಯಾಪ್ಕಿನ್ ಪೂರೈಕೆಗಾಗಿ ಸಾಮಾಜಿಕ ಕಾರ್ಯಕರ್ತರೊಂದಿಗೆ ಫೇಸ್ಬುಕ್ಕಿನಲ್ಲಿ ವಿನಂತಿ ಮಾಡಿದಾಗ, ರಾಹುಲ್ ತನ್ನ ‘ಕಾಂಡೋಮ್ ಕಮೆಂಟ್’ ಹಾಕಿ ವಿಕೃತಿ ಮೆರೆದಿದ್ದ. ಈತ ತನ್ನ ಫೇಸ್ಬುಕ್ ಚಿತ್ರದಲ್ಲಿ “ನನ್ನ ಪ್ರಣಯ ಏನಿದ್ದರೂ ಕೇಸರಿಯೊಂದಿಗೆ ಮಾತ್ರ” ಎಂದು ಪೋಸ್ಟ್ ಮಾಡಿದ್ದ. ಒಟ್ಟಿನಲ್ಲಿ ಜನರ ಸಂಕಷ್ಟಗಳ ಸಮಯದಲ್ಲೂ ವಿಕೃತಿ ಮೆರೆಯುವ ಇಂತಹಾ ಮನೋಸ್ಥಿತಿಗಳಿಗೆ,  ರಾಹುಲ್’ನ ಘಟನೆಯಿಂದಾಗಿ ಒಂದು ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ.

 

To Top
error: Content is protected !!
WhatsApp chat Join our WhatsApp group