ವಿದೇಶ ಸುದ್ದಿ

‘ನಮ್ಮ ಅಭಿವೃದ್ಧಿಯಲ್ಲಿ ಕೇರಳಿಗರೂ ಒಂದು ಭಾಗವಾಗಿದ್ದು, ನಾವು ಭಾರತದ ಸಹೋದರರರ ಜೊತೆಗಿದ್ದೇವೆ’; ಯುಎಇ

ಭೀಕರ ಪ್ರವಾಹಪೀಡಿತ ಕೇರಳಕ್ಕೆ ನೆರವಾಗಲು ಮುಂದಾದ ಯುಎಇ

‘ಭಾರತದಲ್ಲಿರುವ ನಮ್ಮ ಸಹೋದರರಿಗೆ ಸಹಾಯಹಸ್ತ ಜೋಡಿಸುವುದನ್ನು ಮರೆಯದಿರಿ’

ವರದಿಗಾರ (ಆ.19): ‘ನಮ್ಮ ಅಭಿವೃದ್ಧಿಯಲ್ಲಿ ಕೇರಳಿಗರೂ ಒಂದು ಭಾಗವಾಗಿದ್ದು, ಪ್ರವಾಹಕ್ಕೆ ತುತ್ತಾಗಿರುವವರ ಭಾರತದ ಸಹೋದರರರ ಜೊತೆ ನಾವಿದ್ದೇವೆ’ ಎಂದು ಯುಎಇ ಉಪಾಧ್ಯಕ್ಷ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಕೇರಳದ  ಜನತೆಗೆ ನೆರವಾಗಲು ಸಮಿತಿಯೊಂದನ್ನು ಯುಎಇ ರಚಿಸಿದೆ ಎಂದು ಅವರು ಹೇಳಿದ್ದಾರೆ.

“ಯುಎಇಯಲ್ಲಿ  ನಮ್ಮ ಯಶೋಗಾಥೆಯಲ್ಲಿ ಎಂದಿಗೂ ಕೇರಳದ ಜನತೆ ಒಂದು ಭಾಗವಾಗಿದ್ದಾರೆ. ಸಂತ್ರಸ್ತರಿಗೆ ನೆರವಾಗಲು ನಮಗೆ ವಿಶೇಷ ಜವಾಬ್ದಾರಿಯಿದೆ” ಎಂದು ಟ್ವೀಟ್  ಮೂಲಕ ಕೇರಳ ಪ್ರವಾಹ ಸಂತ್ರಸ್ತರ ಬಗ್ಗೆ ನೀಡಿದ ಹೇಳಿಕೆಯು ವ್ಯಾಪಕ ಪ್ರಶಂಸನೆಗೆ ಕಾರಣವಾಗಿದೆ.

“ಯುಎಇ ಹಾಗು ಭಾರತೀಯ ಸಮುದಾಯ ಸಂತ್ರಸ್ತರಿಗೆ ನೆರವಾಗುವಲ್ಲಿ ಪರಸ್ಪರ ಕೈಜೋಡಿಸಲಿದೆ. ತಕ್ಷಣ ಪರಿಹಾರಕ್ಕಾಗಿ ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ” ಎಂದವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

“ಕೇರಳವು ಭಾರೀ ಪ್ರವಾಹಕ್ಕೆ ತುತ್ತಾಗಿದೆ. ನೂರಾರು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಭಾರತದಲ್ಲಿರುವ ನಮ್ಮ ಸಹೋದರರಿಗೆ ಸಹಾಯಹಸ್ತ ಜೋಡಿಸುವುದನ್ನು ಮರೆಯದಿರಿ” ಎಂದೂ ಸಾರ್ವಜನಿಕರೊಂದಿಗೆ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group