ಸಾಮಾಜಿಕ ತಾಣ

ವಾಜಪೇಯಿ ಓರ್ವ ರಾಜಕೀಯ ಮುತ್ಸದ್ದಿ, ಬರಹಗಾರ, ಕವಿ… ಓಹ್ ಕ್ಷಮಿಸಿ…!!

ವರದಿಗಾರ (ಆ 17) : ನಿನ್ನೆ ನಿಧನ ಹೊಂದಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಮಾಧ್ಯಮಗಳು ಸಂತರಂತೆ ಬಿಂಬಿಸಬಾರದೆಂದ  ಧಾಟಿಯಲ್ಲಿ ಫೇಸ್ಬುಕ್ ಪೋಸ್ಟನ್ನು ಮಾಡಿರುವ ‘ಗ್ಲೋಬಲ್ ಶೈನಿಂಗ್ ಲೈಟ್ ‘ ಅವಾರ್ಡ್ ವಿಜೇತೆ, ‘ಗುಜರಾತ್ ಫೈಲ್ಸ್’ ಖ್ಯಾತಿಯ ಯುವ ಪತ್ರಕರ್ತೆ ರಾಣ ಅಯ್ಯೂಬ್ ನೇರವಾಗಿ ಚಾಟಿ ಬೀಸಿದ್ದಾರೆ. ಈ ಮೂಲಕ ಮತ್ತೊಮ್ಮೆ ತನ್ನ ನೇರ ನಡೆ ನುಡಿಗೆ ಖ್ಯಾತಿವೆತ್ತ ರಾಣಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಫೇಸ್ಬುಕ್ ಪೋಸ್ಟ್ ಕೆಳಗಿನಂತಿದೆ.

“ವಾಜಪೇಯಿ ಓರ್ವ ರಾಜಕೀಯ ಮುತ್ಸದ್ದಿ, ಬರಹಗಾರ, ಕವಿ…. ಓಹ್ ಕ್ಷಮಿಸಿ…

ಬಾಬ್ರಿ ಧ್ವಂಸಕ್ಕೆ ಪ್ರಚೋದಿಸಿದವರು ವಾಜಪೇಯಿ,1993 ರ ಮುಸ್ಲಿಮರ ವಿರುದ್ಧದ ಕಗ್ಗೊಲೆಗೆ ಹಿನ್ನೆಲೆಯಲ್ಲಿ ಕಾರಣರಾದವರು, ಭಾರತದ ಜಾತ್ಯತೀತ ಮುಖವನ್ನು ನಾಶಪಡಿಸಿದವರು, ಭಾರತೀಯ ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದವರು, 2002 ರ ಗುಜರಾತ್ ನರಮೇಧದ ಬಳಿಕವೂ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಅಧಿಕಾರದ ಕುರ್ಚಿಯಲ್ಲಿ ಉಳಿಯುವಂತೆ ಮಾಡಿದವರು, ಉನ್ನತ ಅಧಿಕಾರ ಕೇಂದ್ರಗಳಲ್ಲಿ ಕಠಿಣ ಹಿಂದುತ್ವ ಹೇರಿಕೆಗೆ ಪ್ರೇರಣೆ ನೀಡಿದವರು.

ವಾಜಪೇಯಿಯವರನ್ನು ಓರ್ವ ಮಾನವತಾವಾದಿ ಎಂದು ಹೇಳುವ ಮೊದಲು 1993 ರಲ್ಲಿ ಜನರು ಆಯುಧಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರಚೋದಿಸಿದ ಅವರ ಉಗ್ರ ಭಾಷಣಗಳನ್ನು ಕೇಳಬೇಕು.

ಸತ್ತವರನ್ನು ಗೌರವಿಸಬೇಕು ನಿಜ, ಆದರೆ ಪಾಪಿಗಳನ್ನು ಸಂತನಂತೆ ಬಿಂಬಿಸಿಯಲ್ಲ”

ರಾಣಾ ಅವರ ಈ ಫೇಸ್ಬುಕ್ ಪೋಸ್ಟ್ ಬಾಬ್ರಿ ಮಸೀದಿ ಧ್ವಂಸದ ಕುರಿತಂತೆ ವಾಜಪೇಯಿಯವರ ನಿಲುವುಗಳನ್ನು ಕಟುವಾಗಿ ವಿಮರ್ಶಿಸಿದೆ. ಈ ಮೂಲಕ ಜನರು ವಾಜಪೇಯಿಯವರನ್ನು “ಅಜಾತಶತ್ರು” ಎಂಬಂತೆ ಬಿಂಬಿಸುವುದರ ಕುರಿತಂತೆ ತನಗಿರುವ ವಿರೋಧವನ್ನುರಾಣಾ ಅವರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

To Top
error: Content is protected !!
WhatsApp chat Join our WhatsApp group