ಹನಿ ಸುದ್ದಿ

‘ನಿನ್ನ ಬಾಯನ್ನು ಮುಚ್ಚು, ಇಲ್ಲದಿದ್ದರೆ ನಾವು ಮುಚ್ಚುತ್ತೇವೆ’; ಜೆಎನ್ ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಷೀದ್ ಗೆ ಜೀವ ಬೆದರಿಕೆ

ವರದಿಗಾರ (ಆ.14): ದೆಹಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕಿ, ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಷೀದ್ ಗೆ ಜೀವ ಬೆದರಿಕೆಯು ಮಾಫಿಯಾ ಡಾನ್ ರವಿ ಪೂಜಾರಿಯ ಹೆಸರಿನಲ್ಲಿ ಸಂದೇಶ ಬಂದಿದ್ದು, ಶೆಹ್ಲಾ ರಷೀದ್ ರವಿ ಪೂಜಾರಿ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆದ ದಿನವೇ ಬೆದರಿಕೆ ಕರೆ ಬಂದಿದೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿರುವ ಶೆಹ್ಲಾ ರಷೀದ್, ‘ರವಿ ಪೂಜಾರಿ ಹೆಸರಿನಲ್ಲಿ ನನಗೆ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹಾಗೂ ವಡ್ಗಾಂವ್ ಕ್ಷೇತ್ರದ ಶಾಸಕ, ದಲಿತ ಹೋರಾಟಗಾರ ಜಿಗ್ನೀಶ್ ಮೇವಾನಿಯ ಹೆಸರನ್ನು ಉಲ್ಲೇಖಿಸುತ್ತಾ ನಿಮ್ಮ ಬಾಯನ್ನು ಮುಚ್ಚಿ, ಇಲ್ಲದಿದ್ದರೆ ನಾವು ಮುಚ್ಚಿಸುತ್ತೇವೆ’ ಎಂದು ಹೇಳಿರುವ ಸಂದೇಶದ ಸ್ಕ್ರೀನ್ ಶಾಟ್ ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group