ರಾಷ್ಟ್ರೀಯ ಸುದ್ದಿ

ವೈವಾಹಿಕ ಸಂಬಂಧಗಳು ಹೆಚ್ಚಲಿವೆ ಎಂದು 8 ಗ್ರಾಮಗಳ ಮುಸ್ಲಿಮ್ ಹೆಸರುಗಳನ್ನು ಬದಲಿಸಿದ ರಾಜಸ್ಥಾನ ಸರಕಾರ!

‘ಧರ್ಮಧ ಆಧಾರದಲ್ಲಿ ಮತಗಳನ್ನು ಸೆಳೆಯುವ ತಂತ್ರಕ್ಕೆ ಗೃಹ ಸಚಿವಾಲಯ ಒಪ್ಪಿಗೆ’

‘ಮಿಯೋನ್ ಕಿ ಬರಾ’ ಎನ್ನುವ ಹೆಸರಿನ ಗ್ರಾಮಕ್ಕೆ ‘ಮಹೇಶ್ ನಗರ’ ಎಂದು ನಾಮಕರಣ

ವರದಿಗಾರ (ಆ.10): ವೈವಾಹಿಕ ಸಂಬಂಧಗಳು ಹೆಚ್ಚಲಿವೆ ಎಂದು ಸುಮಾರು 8 ಗ್ರಾಮಗಳ ಮುಸ್ಲಿಮ್ ಹೆಸರುಗಳನ್ನು ಬದಲಿಸುವ ರಾಜಸ್ಥಾನದ ವಸುಂಧರಾ ರಾಜೆ ಸರಕಾರದ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವಾಲಯ ಒಪ್ಪಿದೆ. ಮೊದಲ ಹೆಜ್ಜೆಯೆಂಬಂತೆ ‘ಮಿಯೋನ್ ಕಿ ಬರಾ’ ಎನ್ನುವ ಹೆಸರಿನ ಗ್ರಾಮಕ್ಕೆ ಇದೀಗ ‘ಮಹೇಶ್ ನಗರ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಮೂಲಗಳು  ವರದಿ ಮಾಡಿವೆ.

ಈ ನಡೆಗಾಗಿ ರಾಜ್ಯ ಸರಕಾರ ನೀಡಿರುವ ಎರಡು ಕಾರಣಗಳ ವಿರುದ್ಧವೂ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಗ್ರಾಮಗಳಲ್ಲಿ ಹಿಂದೂ ಜನಸಂಖ್ಯೆ ಅಧಿಕವಾಗಿದೆ ಎನ್ನುವುದು ರಾಜ್ಯ ಸರಕಾರ ನೀಡಿದ ಒಂದು ಕಾರಣವಾದರೆ ಮತ್ತೊಂದು, ಈ ಗ್ರಾಮಗಳ ಹೆಸರುಗಳಿಂದ ಇದು ಮುಸ್ಲಿಮ್ ಬಾಹುಳ್ಯದ ಪ್ರದೇಶಗಳು ಎಂದೆನಿಸುತ್ತಿದೆ. ಇವುಗಳ ಮರುನಾಮಕರಣದಿಂದ ವೈವಾಹಿಕ ಸಂಬಂಧಗಳು ಹೆಚ್ಚಲಿವೆ ಎಂಬುದು!.

ಇತ್ತೀಚೆಗೆ ಮುಘಲ್ ಸರಾಯ್ ರೈಲ್ವೆ ನಿಲ್ದಾಣಕ್ಕೆ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಿದ್ದು ಕೂಡ ಭಾರೀ ವಿವಾದ ಸೃಷ್ಟಿಸಿತ್ತು. ಇಂತಹ 27 ಗ್ರಾಮಗಳ ಮರುನಾಮಕರಣವನ್ನು ಪ್ರಸ್ತಾಪಿಸಿ ರಾಜಸ್ಥಾನ ಸರಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾಪ ಕಳುಹಿಸಿತ್ತು. ಈವರೆಗೆ 8 ಗ್ರಾಮಗಳ ಹೆಸರು ಬದಲಾವಣೆಗೆ ಸಚಿವಾಲಯ ಒಪ್ಪಿಗೆ ನೀಡಿದೆ. ಮುಂದಿನ ಚುನಾವಣೆಗೆ ಸಂಬಂಧಿಸಿ ಧರ್ಮದ ಆಧಾರದಲ್ಲಿ ಮತಗಳನ್ನು ಸೆಳೆಯುವ ವಸುಂಧರಾ ರಾಜೆ ಸರಕಾರದ ತಂತ್ರ ಇದು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

To Top
error: Content is protected !!
WhatsApp chat Join our WhatsApp group