ರಾಜ್ಯ ಸುದ್ದಿ

ಬ್ರಿಟೀಷರೊಂದಿಗೆ ಕೈ ಜೋಡಿಸಿದ್ದವರು ಇಂದು ದೇಶ ಪ್ರೇಮದ ಬಗ್ಗೆ ಮಾತನಾಡುತ್ತಾರೆ: ದಿನೇಶ್ ಗುಂಡೂರಾವ್

‘ದೇಶಪ್ರೇಮಿಗಳು, ದೇಶದ್ರೋಹಿಗಳು ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ’-ಸಲಹೆ

‘ದೇಶದಲ್ಲಿ ದ್ವೇಷ ಹಾಗೂ ಅಸಹಿಷ್ಣುತೆಯ ಪ್ರಮಾಣ ಹೆಚ್ಚಾಗುತ್ತಿದೆ’

ವರದಿಗಾರ (ಆ.10): ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮುಸ್ಲಿಂ ಲೀಗ್, ಹಿಂದೂ ಮಹಾಸಭಾ ಸಭಾ, ಆರೆಸೆಸ್ಸ್ ಪಾಲ್ಗೊಂಡಿರಲಿಲ್ಲ. ದೇಶ ಪ್ರೇಮದ ಬಗ್ಗೆ ಇಂದು ಭಾಷಣ ಮಾಡುವ ಇವರು, ಅಂದು ಬ್ರಿಟೀಷರ ಜೊತೆ ಕೈ ಜೋಡಿಸಿದ್ದರು. ಯಾರು ದೇಶಪ್ರೇಮಿಗಳು, ಯಾರು ದೇಶದ್ರೋಹಿಗಳು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

ಅವರು ಗುರುವಾರ ನಗರದ ಪುರಭವನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಕ್ವಿಟ್ ಇಂಡಿಯಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ದೇಶದಲ್ಲಿ ಸಹಿಷ್ಣುತೆ ನೆಲೆಯೂರಬೇಕು. ಪ್ರತ್ಯೇಕತೆಯ ಕೂಗು ಹೆಚ್ಚಾದರೆ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ದ್ವೇಷ ಹಾಗೂ ಅಸಹಿಷ್ಣುತೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಪರಸ್ಪರ ಒಡಕು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದುದರಿಂದ, ಈ ದ್ವೇಷ ಹಾಗೂ ಅಹಿಸುಷ್ಣತೆಯ ಸಿದ್ಧಾಂತದ ವಿರುದ್ಧ ಚಳವಳಿ ಮಾಡುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ, ದೇಶವನ್ನು ಒಟ್ಟಿಗೆ ಹಿಡಿದು ಇಟ್ಟುಕೊಂಡಿರುವುದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ನ ಬುನಾದಿಯ ಆಧಾರದಲ್ಲಿ ಸಂವಿಧಾನ ರಚನೆಯಾಗಿದೆ. ಜವಾಹರ್ಲಾಲ್ ನೆಹರು ಕ್ವಿಟ್ ಇಂಡಿಯಾ ಕರೆಯನ್ನು ನೀಡಿದರು. ಮಹಾತ್ಮಗಾಂಧೀಜಿ ಮಾಡು ಇಲ್ಲವೆ ಮಡಿ(ಡು ಆರ್ ಡೈ) ಕರೆ ನೀಡಿದರು. ಈ ಘೋಷಣೆಗಳೇ ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆಯಾಯಿತು ಎಂದು ಅವರು ಹೇಳಿದರು.

To Top
error: Content is protected !!
WhatsApp chat Join our WhatsApp group