ರಾಜ್ಯ ಸುದ್ದಿ

‘ಸಿಂಹದಂತ ಬಿಜೆಪಿ ಶಾಸಕರನ್ನು ಮುಟ್ಟಿ ನೋಡಿ’ ಎಂದ ಈಶ್ವರಪ್ಪ

ಕಾಂಗ್ರೆಸ್‍ ನ  ಆಮಿಷಕ್ಕೆ ಬಿಜೆಪಿ ಶಾಸಕರು ಬಲಿಯಾಗುವುದಿಲ್ಲ

ಲೋಕಸಭಾ ಚುನವಣಾ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಾಜ್ಯ ಪ್ರವಾಸ

ವರದಿಗಾರ (ಆ.09): ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಶಾಸಕರನ್ನು ನಾವು ಕರೆಯುತ್ತಿಲ್ಲ. ನಾವು ಕರೆದ ಕೂಡಲೇ ಬರುವಷ್ಟು ಕಾಂಗ್ರೆಸ್ ಶಾಸಕರು ದುರ್ಬಲರೇ ಎಂದು ಪ್ರಶ್ನಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಬಿಜೆಪಿ ಶಾಸಕರು ಸಿಂಹ ರೂಪದವರು, ಒಬ್ಬನೇ ಒಬ್ಬ ಶಾಸಕರನ್ನು ಮುಟ್ಟಿ ನೋಡಿ ಎಂದು ಸವಾಲು ಹಾಕಿದ್ದಾರೆ.

ನಗರ ಸ್ಥಳೀಯ ಚುನಾವಣೆ ಹಾಗೂ ಲೋಕಸಭಾ ಚುನವಣಾ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ರಾಜ್ಯಪ್ರವಾಸದ ಅಂಗವಾಗಿ ಮೈಸೂರಿನಿಂದ ಪ್ರವಾಸ ಆರಂಭಿಸಿದ ಅವರು, ಚಾಮುಂಡೇಶ್ವರಿ ಬೆಟ್ಟದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಶಾಸಕರ ಬಗ್ಗೆ ಅವರ ಅಧ್ಯಕ್ಷರಿಗೆ ನಂಬಿಕೆ ಇಲ್ಲ. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಶಾಸಕರು ದುರ್ಬಲರು. ಇಂತಹ ಶಾಸಕರು ರಚಿಸಿರುವ ಸರ್ಕಾರ ಉಳಿಯುತ್ತಾ ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯ ಶಾಸಕರು ಸಿಂಹ ರೂಪದ ಶಾಸಕರು. ಅವರು ಕಾಂಗ್ರೆಸ್‍ನ ಆಮಿಷಕ್ಕೆ ಬಲಿಯಾಗುವುದಿಲ್ಲ, ರಾಜ್ಯ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದ ಸಚಿವರು ಸರ್ಕಾರಿ ನೌಕರರ ವರ್ಗಾವಣೆಯ ಕಮಿಷನ್ ಏಜೆಂಟ್‍ಗಳಾಗಿದ್ದಾರೆ. ರಾಜ್ಯ ಇತಿಹಾಸದಲ್ಲೇ ಇಷ್ಟೊಂದು ವರ್ಗಾವಣೆ ಭ್ರಷ್ಟಾಚಾರ ಆಗಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಅಲೆ ಇದೆ. ಈ ಅಲೆಯಿಂದಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 104 ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group