ರಾಷ್ಟ್ರೀಯ ಸುದ್ದಿ

‘ನಕಲಿ’ ಗೋ ರಕ್ಷಕರ ಹಿಂಸಾಚಾರದಿಂದ ಪ್ರತ್ಯೇಕಿಸಲು ಇನ್ನು ಮುಂದೆ ‘ಅಸಲಿ’ ಗೋ ರಕ್ಷಕ ಗುರುತು ಚೀಟಿ!

‘ಗೋರಕ್ಷಣೆಯ ಹೆಸರಿನಲ್ಲಿ ಕೆಲವರು ಹಿಂಸಾಚಾರದಲ್ಲಿ ತೊಡಗುತ್ತಿದ್ದಾರೆ’ ಎಂಬ ಮೋದಿಯ ಹೇಳಿಕೆಗೆ ಈ ಕ್ರಮ

ವರದಿಗಾರ (ಆ.06): ‘ಗೋರಕ್ಷಣೆಯ ಹೆಸರಿನಲ್ಲಿ ಕೆಲವರು ಹಿಂಸಾಚಾರದಲ್ಲಿ ತೊಡಗುತ್ತಿದ್ದಾರೆ’ ಎಂದು ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದ ಭಾವನೆಗೆ ಅನುಗುಣವಾಗಿ ಉತ್ತರಖಂಡವು ಶೀಘ್ರವೇ ಗೋ ರಕ್ಷಕರಿಗೆ ಗುರುತು ಚೀಟಿಗಳನ್ನು ನೀಡುವ ಮೊದಲ ರಾಜ್ಯವಾಗಲಿದೆ ಮತ್ತು ಅವರನ್ನು ಇನ್ನು ಮುಂದೆ ಗೋ ಸಂರಕ್ಷಕರೆಂದು ಕರೆಯಲಾಗುವುದು ಎಂದು ರಾಜ್ಯ ಗೋ ಸೇವಾ ಆಯೋಗದ ಅಧ್ಯಕ್ಷ ಎನ್.ಎಸ್.ರಾವತ್ ರವರು ಹೇಳಿದ್ದಾರೆ

ಪ್ರಾಮಾಣಿಕ ಗೋರಕ್ಷಕರನ್ನು ಗೋರಕ್ಷಣೆಯ ಹೆಸರಿನಲ್ಲಿ ಹಿಂಸೆಗಿಳಿಯುವ ಗೂಂಡಾಗಳಿಂದ ಪ್ರತ್ಯೇಕವಾಗಿ ಗುರುತಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ 13 ಜಿಲ್ಲೆಗಳ ಪೈಕಿ ಆರರಲ್ಲಿ ನಿಜವಾದ ಗೋರಕ್ಷಕರನ್ನು ಗುರುತಿಸಲಾಗಿದೆ. ಅವರಿಗೆ ಗುರುತು ಚೀಟಿಗಳನ್ನು ನೀಡಲಾಗುವುದು ಎಂದು ಎನ್.ಎಸ್.ರಾವತ್ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group