ರಾಷ್ಟ್ರೀಯ ಸುದ್ದಿ

ಬೆಚ್ಚಿ ಬೀಳಿಸಿದ ಸುದ್ದಿ; ಕರ್ನಾಟಕದಲ್ಲಿ 23 ನಕಲಿ ಎಂಜಿನಿಯರಿಂಗ್ ಕಾಲೇಜುಗಳು!

ದೇಶದಲ್ಲಿ ಒಟ್ಟು 277 ನಕಲಿ ಎಂಜಿನಿಯರಿಂಗ್‌ ಕಾಲೇಜುಗಳು

ವರದಿಗಾರ (ಆ.01): ಕರ್ನಾಟಕದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)  ಮಾನ್ಯತೆ ಪಡೆಯದ 23 ಎಂಜಿನಿಯರಿಂಗ್‌ ಕಾಲೇಜುಗಳಿವೆ ಎಂದು ಬೆಚ್ಚಿ ಬೀಳಿಸುವ ವರದಿಯನ್ನು ಕೇಂದ್ರ ಸರಕಾರ ಹೇಳಿದೆ.

ಈ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್‌ ಮಂಗಳವಾರ ಲೋಕಸಭೆಗೆ ತಿಳಿಸಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾನ್ಯತೆ ಪಡೆಯದ  ಒಟ್ಟು 277 ಎಂಜಿನಿಯರಿಂಗ್ ಕಾಲೇಜುಗಳ ಮಾಹಿತಿಯನ್ನು ಅವರು ನೀಡಿದ್ದಾರೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾನ್ಯತೆ ಪಡೆಯದ  ಎಂಜಿನಿಯರಿಂಗ್ ಕಾಲೇಜುಗಳಲ್ಲಿ

 

ದೆಹಲಿ 66
ತೆಲಂಗಾಣ 35
ಪಶ್ಚಿಮ ಬಂಗಾಳ 27
ಕರ್ನಾಟಕ 23
ಉತ್ತರ ಪ್ರದೇಶ 22
ಹಿಮಾಚಲ ಪ್ರದೇಶ 18
ಬಿಹಾರ 17
ಮಹಾರಾಷ್ಟ್ರ 16
ತಮಿಳುನಾಡು 11
ಗುಜರಾತ್ 8
ಆಂಧ್ರ ಪ್ರದೇಶ 7
ಚಂಢೀಗಡ 7
ಪಂಜಾಬ್ 5
ರಾಜಸ್ತಾನ್ 3
ಉತ್ತರಾಕಾಂಡ್ 3

ಮಾನ್ಯತೆ ಪಡೆಯದ ಎಂಜಿನಿಯರಿಂಗ್‌ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಸಂಬಂಧಿಸಿದ ಎಲ್ಲ ರಾಜ್ಯಗಳಿಗೆ ಮಾಹಿತಿ ನೀಡಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ವರದಿಯು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ರಾಜ್ಯದಲ್ಲಿರುವ ನಕಲಿ ಕಾಲೇಜುಗಳ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇಂತಹ ನಕಲಿ ಕಾಲೇಜುಗಳಿಂದ ಹಲವು ವಿದ್ಯಾರ್ಥಿಗಳ ಜೀವನವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group