ರಾಷ್ಟ್ರೀಯ ಸುದ್ದಿ

‘ಅಧಿವೇಶನದ ನಂತರ ವಿದೇಶಕ್ಕೆ ಹೋಗಿದ್ದರೆ ಆಕಾಶವೇನೂ ಕೆಳಕ್ಕೆ ಬೀಳುತ್ತಿರಲಿಲ್ಲ’: ಮೋದಿ ವಿದೇಶ ಪ್ರವಾಸದ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ

ವರದಿಗಾರ (ಜು.26): ‘ಪ್ರೀತಿಯ ಸರ್ ! ಎಂದಿನಂತೆ ಪಾರ್ಲಿಮೆಂಟ್ ಅಧಿವೇಶನ ನಡೆಯುವಾಗ ನೀವು 3 ಆಫ್ರಿಕನ್ ದೇಶಗಳ ಪ್ರವಾಸದಲ್ಲಿದ್ದೀರಿ. ಅಧಿವೇಶನದ ನಂತರ ಹೋಗಿದ್ದರೆ ಆಕಾಶವೇನೂ ಕೆಳಕ್ಕೆ ಬೀಳುತ್ತಿರಲಿಲ್ಲ. ಜಗತ್ತಿನಲ್ಲಿ ಬಿಟ್ಟು ಹೋದ ಉಳಿದ ದೇಶಗಳಿಗೂ ನೀವು ಭೇಟಿ ನೀಡಬಹುದಿತ್ತು. ಭಾರತದ ಪ್ರಧಾನಿಯೊಬ್ಬರು ರುವಾಂಡಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು, ಅಭಿನಂದನೆಗಳು” ಎಂದು ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿ ಪ್ರಧಾನಿ ಮೋದಿ ಯವರ ವಿದೇಶ ಪ್ರವಾಸದ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ರುವಾಂಡಕ್ಕೆ ಪ್ರಧಾನಿ ಮೋದಿ, 200 ಗೋವುಗಳನ್ನು ನೀಡಿರುವ ಬಗ್ಗೆಯೂ ಉಲ್ಲೇಖೀಸಿರುವ ಅವರು, “ರುವಾಂಡಕ್ಕೆ 200 ಹಸುಗಳನ್ನು ನೀಡಿದ ಕ್ರಮ ಚಿಂತನಶೀಲವಾದದ್ದು. ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಇದು ಗಟ್ಟಿಗೊಳಿಸಬಹುದು. ಆದರೆ ಸರ್ ! ನೀವು ಹಿಂದಿರುಗುವಾಗ ಗೋರಕ್ಷಕರಿಂದ ನಡೆದ ಹತ್ಯೆಗಳ ಬಗ್ಗೆ ವಿಪಕ್ಷಗಳ ಬಳಿ ಸುದ್ದಿಗಳಿವೆ” ಎಂದು ಸಿನ್ಹಾ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group