ಜಿಲ್ಲಾ ಸುದ್ದಿ

ಸ್ವಾಮಿ ಅಗ್ನಿವೇಶ್‌ರವರ ಮೇಲಿನ ದಾಳಿ ಮತ್ತು ಬೀದರ್‌ನಲ್ಲಿ ನಡೆದ ಗುಂಪು ಹತ್ಯೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲು ಆಗ್ರಹಿಸಿ ಎಸ್ ಡಿ ಪಿ ಐ ಪ್ರತಿಭಟನೆ

ಸಾಮಾಜಿಕ ಹೋರಾಟಗಾರ, ಹಿರಿಯ ಆರ್ಯ ಸಮಾಜದ ಸಂತ ಸ್ವಾಮಿ ಅಗ್ನಿವೇಶ್‌ರವರ ಮೇಲೆ ಜಾರ್ಖಾಂಡ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಮತ್ತು ಎಬಿವಿಪಿ ಗೂಂಡಾಗಳು ನಡೆಸಿದ ಮಾರಣಾಂತಿಕ ಅಮಾನವೀಯ ದಾಳಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.


ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಆಶ್ರಫ್ ಮಾಚಾರ್ ರವರು
ಜಾರ್ಖಾಂಡ್‌ನಲ್ಲಿ ಆದಿವಾಸಿಗಳ ಸಭೆಯೊಂದರಲ್ಲಿ ಭಾಗವಹಿಸಿದ ಸ್ವಾಮಿ ಅಗ್ನಿವೇಶ್‌ರವರ ಮೇಲಿನ ದಾಳಿಯು ಸಂಘಪರಿವಾರದ ಪೂರ್ವನಿಯೋಜಿತ ಕೃತ್ಯವಾಗಿದೆ. ಹಿಂದುತ್ವ ಫ್ಯಾಶಿಸಂ ದೇಶದಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲುಗೊಳಿಸುತ್ತಿದೆ. ಹಿಂದುತ್ವದ ವಿರುದ್ಧವಾಗಿ ಸೈದ್ಧಾಂತಿಕ ಹೊರಾಟ ಮಾಡುವ ವಿಚಾರವಾದಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದೇ ಅವರ ಸುಳ್ಳು ಸಿದ್ಧಾಂತಗಳು ದೇಶದಲ್ಲಿ ಬಯಲಾಗುತ್ತಿರುವಾಗ ಅದನ್ನು ಮರೆಮಾಚಲು ಈ ರೀತಿಯ ದೈಹಿಕ ಹಲ್ಲೆಯನ್ನು ನಡೆಸುತ್ತಿದ್ದಾರೆ.ಅದಲ್ಲದೆ ಹಲ್ಲೆಯನ್ನು ಮಾಡಿದ ಇತಿಹಾಸವು ನಮ್ಮ ಮುಂದಿದೆ. ಗೋವಿಂದ ಪನ್ಸಾರೆ, ದಾಬೋಲ್ಕರ್, ಎಂ.ಎಂ. ಕಲ್ಬುರ್ಗಿ, ಗೌರಿ ಲಂಕೇಶ್ ಮೊದಲಾದ ವಿಚಾರವಾದಿಗಳನ್ನು ಗುಂಡಿಕ್ಕಿ ಕೊಂದದ್ದು ಇದೇ ಹಿಂದುತ್ವ ಗೂಂಡಾಗಳಾಗಿದ್ದಾರೆ ಎಂದರು.
ಮುಖ್ಯ ಭಾಷಣವನ್ನು ಮಾಡಿದ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆಯವರು ಮಾತನಾಡಿ
ಅಮಾನವೀಯ ರೀತಿಯ ಅರಾಜಕತೆಗಳು ದೇಶದಾದ್ಯಂತ ನಡೆಯುತ್ತಿರುವಾಗಲೂ ದೇಶದ ಪ್ರಧಾನಿ ಮೌನ ವಹಿಸಿರುವುದು ಹಿಂದುತ್ವ ಗೂಂಡಾಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಅನುಮತಿಸಿದಂತಾಗಿದೆ. ಜಾರ್ಖಾಂಡ್ ಸರಕಾರದ ಸಚಿವರು, ಶಾಸಕರು ಕೂಡಾ ಹಲ್ಲೆ ನಡೆಸಿದ ಆರೋಪಿಗಳ ಪರವಾಗಿ ವಕಾಲತ್ತು ಹಾಕುತ್ತಿರುವುದು ನೋಡುವಾಗ ದೇಶವೇ ಅರಾಜಕತೆಯಲ್ಲಿರುವುದು ಎದ್ದು ಕಾಣುತ್ತಿದೆ. ದೇಶದಲ್ಲಿ ಶಾಂತಿ, ನೆಮ್ಮದಿ ಮತ್ತು ಎಲ್ಲರಿಗೂ ಬದುಕುವ ಅವಕಾಶ ಮತ್ತು ಹಕ್ಕು ಸಿಗಬೇಕಾದಲ್ಲಿ ಹಿಂದುತ್ವ ಫ್ಯಾಶಿಸಂನ್ನು ದೇಶದಿಂದ ನಿರ್ಮೂಲನೆ ಮಾಡಬೇಕಾಗಿದೆ. ಆದುವುದರಿಂದ ಎಲ್ಲಾ ಪ್ರಜ್ಞಾವಂತ ನಾಗರಿಕರು ಜತ್ಯಾತೀತ ಉಳಿವಿಗಾಗಿ ಒಂದಾಗಬೇಕಾಗಿದೆ.
ಅದೇ ರೀತಿ ಉತ್ತರ ಭಾರತದ ಕಡೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯು ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ. ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಗುಂಪೊಂದು ಮಕ್ಕಳ ಕಳ್ಳ ಸಾಗಾಣಿಕೆ ನಡೆಸುವವರು ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿ ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಮುಹಮ್ಮದ್ ಆಝಂ ಎಂಬ ಯುವಕನನ್ನು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ನಡೆದಿದ್ದು ಇದನ್ನು ಎಸ್‌ಡಿಪಿಐ ಖಂಡಿಸುತ್ತಿದೆ.
ಈ ರೀತಿಯ ದೌರ್ಜನ್ಯ ನಡೆಸಿ ಗುಂಪು ಹತ್ಯೆ ಗುಂಪು ಹಿಂಸೆಯ ದಾಳಿ ನಡೆಸುವವರ ಮೇಲೆ ಸರಕಾರವು ಹೊಸ ಕಠಿಣ ಕಾನೂನು ಕಾಯ್ದೆಯನ್ನು ಜಾರಿಗೆ ಕ್ರಮ ಜರಗಿಸಬೇಕೆಂದು ಎಸ್‌ಡಿಪಿಐ ಒತ್ತಾಯಿಸುತ್ತಿದೆ ಎಂದು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಹೈಲ್ ಖಾನ್(ಅಧ್ಯಕ್ಷರು ಎಸ್ಡಿಪಿಐ ಮಂ.ದಕ್ಷಿಣ ಕ್ಷೇತ್ರ) ಜಲೀಲ್.ಕೆ ರಾಜ್ಯ ಸಮಿತಿ ಸದಸ್ಯರು ಎಸ್ಡಿಪಿಐ ಕರ್ನಾಟಕ, ಅಯಾಝ್ ಕೃಷ್ಣಾಪುರ, ನುರುಲ್ಲಾ ಕುಳಾಯಿ (ಕೋಶಾಧಿಕಾರಿ ಎಸ್ಡಿಪಿಐ ದ.ಕ ಜಿಲ್ಲೆ ) ಮುನೀಬ್ ಬೆಂಗ್ರೆ ಜಿಲ್ಲಾ ಸಮಿತಿ ಸದಸ್ಯರು,
ಝಾಹಿದ್ ಮಲಾರ್ ಜಿಲ್ಲಾ ಸಮಿತಿ ಸದಸ್ಯರು,
ಸುಲೈಮಾನ್ ಉಸ್ತಾದ್ ಮತ್ತಿತರು ಉಪಸ್ಥಿತರಿದ್ದರು.
ಖಾದರ್ ಅಮ್ಮೆಮ್ಮಾರ್ ಸ್ವಾಗತಿಸಿ,ವಂದಿಸಿದರು.

To Top
error: Content is protected !!
WhatsApp chat Join our WhatsApp group