ಜಿಲ್ಲಾ ಸುದ್ದಿ

ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ವಿಳಂಬ ; ಎಸ್ ಡಿ ಪಿ ಐ ನಿಯೋಗದಿಂದ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ

▪ ತೊಕ್ಕೋಟು ಮೇಲ್ಸೇತುವೆ ಡಿಸಂಬರ್ ಹಾಗೂ ಪಂಪ್’ವೆಲ್ ಮೇಲ್ಸೆತುವೆ ಕಾಮಗಾರಿ ಬರುವ ಮಾರ್ಚ್ ನಲ್ಲಿ ಪೂರ್ಣಗೊಳಿಸುವ ಕರಾರು !

ವರದಿಗಾರ (ಜು 17) : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕಳೆದ ಹಲವು ವರ್ಷಗಳಿಂದ ಅಮೆಗತಿಯಲ್ಲಿ ಸಾಗುತ್ತಿದ್ದು ಅವ್ಯವಸ್ಥೆಯಿಂದು ಕೂಡಿದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚರಿಸಲು ಕಷ್ಟಪಡುತ್ತಿದ್ದು,  ಇದರ ಬಗ್ಗೆ ಹಲವು ದೂರುಗಳು ಸಲ್ಲಿಸಿದರೂ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು, ಶಾಸಕರು ಮತ್ತು ಸಂಸದರು ಮೌನವಹಿಸಿರುವುದು ಕಂಡುಬಂದಿದೆ.

ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ ವಿಳಂಬ ನೀತಿಯ ಬಗ್ಗೆ ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆಯವರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳೊಂದಿಗೆ ಹೆದ್ದಾರಿ ಸಮಸ್ಯೆಗಳನ್ನು ಪರಿಹರಿಸಿ ಶೀಘ್ರವಾಗಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಪೂರ್ತಿಗೊಳಿಸುವ ಬಗ್ಗೆ ಚರ್ಚಿಸಲಾಯಿತು.

ಜಿಲ್ಲಾಧಿಕಾರಿಗಳು ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಳಂಬದ ಬಗ್ಗೆ ಸಭೆ ನಡೆಸಿದ್ದು,  ಗುತ್ತಿಗೆದಾರರು ತೊಕ್ಕೊಟ್ಟು ಒವರ್ ಬ್ರಿಡ್ಜ್ ಹೆದ್ದಾರಿ ಕಾಮಗಾರಿಯನ್ನು ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಸಂಪೂರ್ಣಗೊಳಿಸುವ ಮತ್ತು ಪಂಪ್ ವೆಲ್ ಒವರ್ ಬ್ರಿಡ್ಜ್ ಹೆದ್ದಾರಿ ಕಾಮಗಾರಿ ಬರುವ ಮಾರ್ಚ್ ತಿಂಗಳಲ್ಲಿ ಪೂರ್ತಿಗೊಳಿಸುವ ಬಗ್ಗೆ ಕರಾರು ಒಪ್ಪಂದವನ್ನು ಮಾಡಿದ್ದಾರೆ ಎಂದು ಭರವಸೆಯನ್ನು ಕೊಟ್ಟರು.

ಅಷ್ಟರವರೆಗೆ ರಸ್ತೆಗಳ ಹೊಂಡಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ನಿಯೋಗವು ಒತ್ತಾಯಿಸಿತು. ನಿಯೋಗದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯ ಮುನೀಬ್ ಬೆಂಗ್ರೆ , ಎಸ್ ಡಿ ಪಿ ಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಸುಹೈಲ್ ಖಾನ್, ಸಮಿತಿ ಸದಸ್ಯರಾದ ರಮೀಝ್ ಹಾಗೂ ಇತರರು ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group