ಜಿಲ್ಲಾ ಸುದ್ದಿ

40 ಕಿ.ಮೀ. ರಸ್ತೆ ಮಾಡಿಸಲಾಗದ ಸಂಸದ ನಳಿನ್ ಕುಮಾರ್ ನಮಗೆ ಯಾಕೆ ಬೇಕು: ಐವನ್ ಡಿಸೋಜ ಪ್ರಶ್ನೆ

‘ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಸಂಸದರ ನಡೆ ಎಷ್ಟು ಸರಿ?’

‘ನಳಿನ್ ಕುಮಾರ್ ಮೊದಲು ಡಿ.ವಿ. ಸದಾನಂದ ಗೌಡ ಸಂಸದರಾಗಿದ್ದರು. ಅವರ ಅವಧಿಯಲ್ಲಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ಬಿಟ್ಟರೆ ಇವರಿಬ್ಬರೂ ಏನೂ ಮಾಡಿಲ್ಲ’

‘ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಮೌನ ತಾಳಿರುವುದರ ಹಿಂದಿನ ಮರ್ಮ ಏನು?’

ವರದಿಗಾರ (ಜು.17): ರಾಷ್ಟ್ರೀಯ ಹೆದ್ದಾರಿ 66 ಅವೈಜ್ಞಾನಿಕ, ಅಪೂರ್ಣ ಕಾಮಗಾರಿಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕೇವಲ 45 ಕಿ.ಮೀ. ರಸ್ತೆ ಮಾಡಲಾಗದ ಸಂಸದರು ಯಾಕೆ ಇರಬೇಕು ಮತ್ತು ಕಾಮಗಾರಿ ಸಂಪೂರ್ಣವಾಗಲು ಇನ್ನೆಷ್ಟು ವರ್ಷ ಬೇಕು? ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

ಸೋಮವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಪಂಪ್‌ವೆಲ್, ನಂತೂರು, ಕೊಟ್ಟಾರಚೌಕಿ, ಮುಲ್ಕಿಯಲ್ಲಿ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ವಾಗಿರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ ನೀರು ಹೆದ್ದಾರಿ ಮೇಲೆ ಹರಿಯುತ್ತಿದೆ. ಉತ್ತಮ ತಂತ್ರಜ್ಞಾನದಿಂದ ಹೆದ್ದಾರಿ ಕಾಮಗಾರಿ ನಡೆಸುವುದಾಗಿ ಹೇಳುವ ಸಂಸದರು ಇದಕ್ಕೇನು ಹೇಳುತ್ತಾರೆ ? ಹೆದ್ದಾರಿ ಕೆಲಸ ಪೂರ್ಣಗೊಳಿಸದೆ ಟೋಲ್ ಸಂಗ್ರಹ ಕೂಡ ಮಾಡುತ್ತಿದೆ. ಅದನ್ನು ತಡೆಯಲಾಗದೆ ಸಂಸದರು ಅಸಹಾಯಕತೆ ವ್ಯಕ್ತಪಡಿಸುವುದು ಎಷ್ಟು ಸರಿ ಎಂದರು.

ಸಂಸದ ನಳಿನ್ ಕುಮಾರ್ ದ.ಕ. ಜಿಲ್ಲೆಯ ಸಂಸದರಾಗಿ 10 ವರ್ಷಗಳಾಯಿತು. ಅದಕ್ಕಿಂತ ಹಿಂದೆ ಡಿ.ವಿ. ಸದಾನಂದ ಗೌಡ ಸಂಸದರಾಗಿದ್ದರು. ಈ ಅವಧಿಯಲ್ಲಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ಬಿಟ್ಟರೆ ಇವರಿಬ್ಬರೂ ಏನೂ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೋಗಿದ್ದರೂ ನಿರ್ವಹಣೆ ಕೂಡಾ ಮಾಡಿಲ್ಲ. ಪಡುಬಿದ್ರೆ ಸಹಿತ ಎರಡೂ ಜಿಲ್ಲೆಗಳ ಮೇಲ್ಸೇತುವೆಗಳು ಪೂರ್ತಿಯಾಗದೆ ಸಮಸ್ಯೆಯಾಗಿದೆ. ಉಭಯ ಜಿಲ್ಲೆಗಳ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಮೌನ ತಾಳಿರುವುದರ ಹಿಂದಿನ ಮರ್ಮವೇನು? ಎಂದು ಐವನ್ ಪ್ರಶ್ನಿಸಿದ್ದು, ಹೆದ್ದಾರಿ ಕಾಮಗಾರಿ ಪೂರ್ತಿಯಾಗದಿದ್ದರೆ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group