ಸುತ್ತ-ಮುತ್ತ

ಜೋಕಟ್ಟೆ : ಸ್ಥಳಾಂತರಗೊಂಡ ಮಾಹಿತಿ ಕೇಂದ್ರದ ನೂತನ ಕಛೇರಿ ಉದ್ಘಾಟನೆ

ಜೋಕಟ್ಟೆಯ ಮಾಹಿತಿ ಕೇಂದ್ರದ ನೂತನ ಕಛೇರಿಯ ಉದ್ಘಾಟನೆ ಜುಲೈ 16 ರಂದು ನಡೆಯಿತು. ಇದರ ಉದ್ಘಾಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ. ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಕುಳಾಯಿಯವರು ನಿರ್ವಹಿಸಿದರು.

ಸಭಾ ಕಾರ್ಯಕ್ರಮದಲ್ಲಿ ಜೋಕಟ್ಟೆ ಗ್ರಾಮದಿಂದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅಶ್ರಫ್ ಮಾಚಾರ್ ಹಾಗೂ ದ ಕ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಎ ಎಂ ಅಥಾವುಲ್ಲಾ ಜೋಕಟ್ಟೆಯವರನ್ನು ಸನ್ಮಾನಿಸಲಾಯಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ವಲಯಾಧ್ಯಕ್ಷ ಇಸ್ಮಾಯೀಲ್ ಇಂಜಿನಿಯರ್, ಜೋಕಟ್ಟೆ ಏರಿಯಾ ಅಧ್ಯಕ್ಷ ಸಾದಿಕ್ ಪೊರ್ಕೋಡಿ, ಹಳೆ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಬೀಬ್ ಜೋಕಟ್ಟೆ, ಅಂಜುಮಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ ಎಂ ರಫೀಕ್ , ಎಸ್ಡಿಪಿಐ ಉತ್ತರ ಕ್ಷೇತ್ರದ ಕಾರ್ಯದರ್ಶಿ ಅಝರ್ ಕೃಷ್ಣಾಪುರ ಹಾಗೂ ಮಾಹಿತಿ ಕೇಂದ್ರದ ಸಂಚಾಲಕ ಪರ್ವೀಝ್ ಅಲಿ ಹಾಜರಿದ್ದರು.

ಕಾರ್ಯಕ್ರಮವನ್ನು ಎ ಕೆ ಅಶ್ರಫ್ ಸ್ವಾಗತಿಸಿ, ಜಮಾಲ್ ವಂದಿಸಿದರು. ಇಕ್ಬಾಲ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

To Top
error: Content is protected !!
WhatsApp chat Join our WhatsApp group