ಪ್ರತಿಭೆ

ಅಥ್ಲೆಟಿಕ್‍ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಮೊದಲ ಕ್ರೀಡಾಪಟು ಹಿಮಾ ದಾಸ್

ಭಾರತದ ಹೆಮ್ಮೆಯ ಸುಪುತ್ರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಡಿಸಿಎಂ ಪರಮೇಶ್ವರ್

ವರದಿಗಾರ- ಜು.15: ಫಿನ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನ ಮಹಿಳೆಯರ 400 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಅಥ್ಲೀಟ್ ‘ಹಿಮಾ ದಾಸ್’ ಅವರಿಗೆ ಉಪ ಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ 10 ಲಕ್ಷ ರೂ.ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

Image result for hima das

‘ಅಥ್ಲೆಟಿಕ್ ಟ್ರ್ಯಾಕ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದಲ್ಲೇ ಮೊದಲ ಕ್ರೀಡಾ ಪಟು ಹಿಮಾದಾಸ್. ಹಳ್ಳಿ ಹುಡುಗಿಯಾದ ಹಿಮಾದಾಸ್ ಅವರ ಈ ಸಾಧನೆ ಲಕ್ಷಾಂತರ ಯುವ ಕ್ರೀಡಾಪಟಗಳಿಗೆ ಮಾದರಿಯಾಗಿದೆ’ ಎಂದು ಪರಮೇಶ್ವರ್ ಶ್ಲಾಘಿಸಿದ್ದಾರೆ.

Image result for hima das

ಹಿಮಾದಾಸ್ ಅವರಂತೆ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ತೋರಿ, ಮುಂದೆ ಬರಬೇಕು. ನಾನೂ ಅಥ್ಲೀಟ್ ಆಗಿದ್ದವನು ಕಾಲೇಜು ದಿನಗಳಲ್ಲಿ ಅಂತರ ವಿಶ್ವ ವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಗೆದ್ದಿದ್ದೆ. ನನ್ನ 10.9 ಸೆಕೆಂಡ್‌ನ ಗೆಲುವನ್ನು ಇನ್ನೂ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ ಅಲ್ಲದೆ, ಸಾಕಷ್ಟು ರಾಷ್ಟ್ರೀಯ ಮಟ್ಟದಲ್ಲಿ ಜಯಗಳಿಸಿದ್ದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತರಬೇತಿಯೂ ಪಡೆದಿದ್ದೆ ಎಂದು ಕ್ರೀಡೆ ಮೇಲಿರುವ ಅವರ ಆಸಕ್ತಿ ಬಿಚ್ಚಿಟ್ಟಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷರು ಹಾಗೂ ಆಲ್ ಇಂಡಿಯಾ ಅಥ್ಲೆಟಿಕ್ಸ್ ಫೆಡರೇಷನ್‌ನ ಉಪಾಧ್ಯಕ್ಷರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Image result for hima das

Related image

Image result for hima das

Image result for hima dasRelated image

Image result for hima das

Image result for hima das

To Top
error: Content is protected !!
WhatsApp chat Join our WhatsApp group