ಜಿಲ್ಲಾ ಸುದ್ದಿ

ವಕ್ಫ್  ಇಲಾಖೆಯಿಂದ ಪೇಶ್ ಇಮಾಮ್ ಹಾಗೂ ಮುಅಝ್ಝಿನ್ ರಿಗೆ ದೊರೆಯುವ ಗೌರವಧನ  ನೀಡುವಲ್ಲಿ ವಿಳಂಬ: ತುರ್ತು ಕ್ರಮಕ್ಕೆ ಎಸ್. ಡಿ.ಪಿ.ಐ ಯಿಂದ ಸಚಿವರಿಗೆ ಮನವಿ

ವರದಿಗಾರ- ಜು.14: ರಾಜ್ಯ ವಕ್ಪ್  ಇಲಾಖೆಯಿಂದ ಪೇಶ್ ಇಮಾಮ್ ಮತ್ತು  ಮುಅಝ್ಝಿನ್ ರವರಿಗೆ ದೊರೆಯುವ ಗೌರವಧನ  ನೀಡುವಲ್ಲಿ ವಿಳಂಬವಾಗುತ್ತಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಎ.ಎಂ. ಅಥಾವುಲ್ಲಾ ಹಜ್ಜ್ ಮತ್ತು ವಕ್ಫ್ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಸಚಿವರಿಗೆ ನೀಡಲಾದ ಪತ್ರದಲ್ಲಿ ಉಲ್ಲೇಖಿಸಿದಂತೆ, ರಾಜ್ಯ ಸರಕಾರವು ಹಿಂದುಳಿದ,  ಅಲ್ಪಸಂಖ್ಯಾತ, ಶೋಷಿತ ಜನರನ್ನು ಆರ್ಥಿಕವಾಗಿ ಮೇಲೆತ್ತುವ ನಿಟ್ಟಿನಲ್ಲಿ ಹಲವಾರು ಸಹಾಯಧನ ಮತ್ತು ಗೌರವ ಧನ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಆದರೆ ಅರ್ಹ ವ್ಯಕ್ತಿಗಳಿಗೆ ಯೋಜನೆಯನ್ನು ತಲುಪಿಸಬೇಕೆನ್ನುವ ಸರಕಾರದ ಉದ್ದೇಶವು ಸಾರ್ವಜನಿಕರಲ್ಲಿನ ಮಾಹಿತಿಯ ಕೊರತೆಯಿಂದಾಗಿ ಪರಿಪೂರ್ಣಗೊಳ್ಳುತ್ತಿಲ್ಲ. ಇಂಥಹ ಯೋಜನೆಗಳ ಪಾಲಿಗೆ ರಾಜ್ಯ ವಕ್ಪ್  ಇಲಾಖೆಯ ಪೇಶ್ ಇಮಾಮ್ ಮತ್ತು  ಮುಅಝ್ಝಿನ್ ರವರಿಗೆ ನೀಡುವ ಸಹಾಯಧನ ಯೋಜನೆ ಕೂಡ ಒಂದು. ಯೋಜನೆಯ ಫಲಾನುಭವಿಗಳಾಗಬೇಕಿದ್ದ ಜಿಲ್ಲೆಯ ಹೆಚ್ಚಿನ ಮಸೀದಿಗಳ ಇಮಾಮರು ಮತ್ತು ಮುಅಝ್ಝಿನ್ ರವರು ಯೋಜನೆಯ ಬಗೆಗಿನ ಪೂರ್ಣ ಮಾಹಿತಿಯ ಕೊರತೆಯಿಂದಾಗಿ ಈ ಯೋಜನೆಯ ಪ್ರಯೋಜನ ಪಡೆಯಲಾಗುತ್ತಿಲ್ಲ ಮತ್ತು ಮಾಹಿತಿಯ ಕೊರತೆಯನ್ನು ನೀಗಿಸುವ ಪ್ರಯತ್ನವೂ ಜಿಲ್ಲಾ ವಕ್ಫ್ ಮಂಡಳಿಗಳಿಂದ ನಡೆಯುತ್ತಿಲ್ಲ ಎನ್ನುವುದು ವಿಷಾದನೀಯ.ಆದರೆ ಈಗಾಗಲೇ ಅರ್ಜಿ ಸಲ್ಲಿಸಿದ ಹೆಚ್ಚಿನ ಅರ್ಹ ಇಮಾಮ್ ಮತ್ತು ಮುಅಝ್ಝಿನ್ ಗಳ ಗೌರವಧನವು ಅರ್ಜಿ ಸಲ್ಲಿಕೆಯಾಗಿ ಒಂದು ವರ್ಷ ಕಳೆದರೂ ಇಲಾಖೆಯಿಂದ ನೀಡಲಾಗುತ್ತಿಲ್ಲ. ಈ ಬಗ್ಗೆ ಅವರು ಕಳೆದೊಂದು ವರ್ಷಗಳಲ್ಲಿ ಜಿಲ್ಲಾ ವಕ್ಫ್ ಮತ್ತು ರಾಜ್ಯ ವಕ್ಫ್ ಕಚೇರಿಗಳಿಗೆ ಹಲವು ಬಾರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗದೇ ಇರುವುದು ಈ ಯೋಜನೆ ಬಗೆಗಿನ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂಬ ವಿಚಾರವನ್ನು ರಾಜ್ಯದ  ವಕ್ಫ್ ಇಲಾಖೆಯ ಸಚಿವರಾದ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಜಿಲ್ಲೆಯ ಇಮಾಮ್ ಮತ್ತು ಮುಅಝ್ಝಿನ್ ಪರವಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸುವುದೇನಂದರೆ ಈಗಾಗಲೇ ಸಲ್ಲಿಕೆಯಾದ ಅರ್ಹ ಅರ್ಜಿಗಳಿಗೆ ಮಾಸಿಕ ಗೌರವ ಧನವನ್ನು ಶೀಘ್ರ ಬಿಡುಗಡೆಗೊಳಿಸಿ ಸದ್ರಿಯವರುಗಳು ಕಚೇರಿಗಳಿಗೆ ಅಲೆದಾಡುವುದನ್ನು ಇಲ್ಲವಾಗಿಸಬೇಕು ಮತ್ತು ವಕ್ಫ್ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯ ಪಡಿಸಲು ರಾಜ್ಯ ಮತ್ತು ಜಿಲ್ಲಾ ವಕ್ಫ್ ಮಂಡಳಿಗಳಿಗೆ ಸೂಚಿಸಬೇಕಾಗಿ ವಿನಂತಿಸುತ್ತೇನೆ.

ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ  ಪಕ್ಷದ ವತಿಯಿಂದ ಹೋರಾಟ ನಡೆಸುವುದಾಗಿ ಎಸ್.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಮನವಿಯಲ್ಲಿ ಉಲ್ಲೇಖಿಸಿದನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group