ರಾಷ್ಟ್ರೀಯ ಸುದ್ದಿ

ಭಾರತದ ಮೂಲ ತತ್ವ ಅಪಾಯದಲ್ಲಿದೆ: ಹಾಮಿದ್ ಅನ್ಸಾರಿ ಕಳವಳ

‘ಭಾರತವು ಅಸಹಿಷ್ಣು ಪ್ರಜಾಸತ್ತೆಯಾಗುವ ಅಪಾಯವಿದೆ’
ಮೊದಲ ಬಾರಿ ಬಹಿರಂಗವಾಗಿ ಮಾತನಾಡಿದ ಮಾಜಿ ಉಪರಾಷ್ಟ್ರಪತಿ

ವರದಿಗಾರ- ಜು.13: ಭಾರತದ ಮೂಲ ತತ್ವವೇ ಅಪಾಯದಲ್ಲಿದೆ ಎಂದು ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು NDTV ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಭಾರತದ ಮೂಲ ತತ್ವವೇ ಅಪಾಯದಲ್ಲಿದ್ದು, ದೇಶವು ಅಸಹಿಷ್ಣು ಪ್ರಜಾಸತ್ತೆಯಾಗುವ ಅಪಾಯವಿದೆ ಎಂದು ಹೇಳಿ ಮೊದಲ ಬಾರಿ ಬಹಿರಂಗವಾಗಿ ಜನತೆಯನ್ನು ಎಚ್ಚರಿಸಿದ್ದಾರೆ.

ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ NDTV ಗೆ ನೀಡಿದ ಸಂದರ್ಶನ:


ನಮ್ಮ ರಾಷ್ಟ್ರೀಯತೆಯನ್ನು ಭಾರತೀಯ ಸಂವಿಧಾನದಲ್ಲಿ ವಿವರಿಸಲಾಗಿದ್ದು, ಅದು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ.  ಹೆಚ್ಚು ದೇಶಭಕ್ತರು, ಕಡಿಮೆ ದೇಶಭಕ್ತರು ಎಂದು ಅಳೆಯುವುದು ಸರಿಯಲ್ಲ ಎಂದು ನಕಲಿ ದೇಶ ಭಕ್ತರಿಗೆ ಅವರು ಸಲಹೆ ನೀಡಿದ್ದಾರೆ. ದೇಶಭಕ್ತ ಎಂದರೆ ಹೀಗೆ ಇರಬೇಕು ಎಂದು ಹೇಳುವ ಮೂಲಕ ಜನರಲ್ಲಿ ಅಸಮಾನತೆ ಉಂಟು ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭಾರತದ ಮೂಲ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ನಮ್ಮದು ಬಹುತ್ವದ ಸಮಾಜವಾಗಿದ್ದು ಜಾತ್ಯತೀತವಾದಕ್ಕೆ ಮತ್ತು ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ಪಟ್ಟಿ ಮಾಡಲಾಗಿರುವ ತತ್ವಗಳ ಸಾಕಾರಕ್ಕೆ ಬದ್ಧವಾಗಿದೆ ಎಂದು ಅನ್ಸಾರಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group