ಅನಿವಾಸಿ ಕನ್ನಡಿಗರ ವಿಶೇಷ

ಮಾಜಿ ಸಚಿವ ಬಿ ಎ ಮೊಯಿದಿನ್ ನಿಧನ : ಇಂಡಿಯನ್ ಸೋಶಿಯಲ್ ಫೋರಮ್ ಜಿದ್ದಾ ಸಂತಾಪ

ರಾಜ್ಯದ ಶಿಕ್ಷಣ ತಜ್ಞನೆಂದೇ ಖ್ಯಾತಿವೆತ್ತ  ಹಿರಿಯ ಮುತ್ಸದ್ದಿ,ಮಾಜಿ ಸಚಿವ ಬಿ ಎ ಮೊಯಿದಿನ್ ರವರ ನಿಧನಕ್ಕೆ ಇಂಡಿಯನ್ ಸೋಶಿಯಲ್ ಫೋರಮ್( ಐ ಎಸ್ ಎಫ್) ಜಿದ್ದಾ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೊಯಿದಿನ್ ರವರು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗದೆ ಸಮುದಾಯದೊಳಗಿನ ಸಮಸ್ಯೆಗಳನ್ನು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಪರಿಹರಿಸುವಲ್ಲಿ ಸಮುದಾಯಕ್ಕೆ ನೇತೃತ್ವವನ್ನು ನೀಡುತಿದ್ದರು. ಜೀವನದುದ್ದಕ್ಕೂ ಜಾತ್ಯತೀತ ಸಿದ್ದಾಂತವನ್ನು ನಂಬಿಕೊಂಡಿದ್ದ ಬಿ ಎ ಮೊಯಿದಿನ್ ರವರ ನಿಧನ ಜಿಲ್ಲೆಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಜಿದ್ದಾ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

To Top
error: Content is protected !!
WhatsApp chat Join our WhatsApp group