ಜಿಲ್ಲಾ ಸುದ್ದಿ

ಸುಳ್ಳು ಮಾಹಿತಿ ನೀಡುವುದನ್ನು ನಿಲ್ಲಿಸಿ ಸಮಸ್ಯೆಯನ್ನು ಶೀಘ್ರ ಪರಿಹರಿಸಿ : ಸೈಂಟ್ ಆಗ್ನೆಸ್ ಕಾಲೇಜಿಗೆ ಮುಸ್ಲಿಮ್ ಮುಖಂಡರ ಸಭೆ ಆಗ್ರಹ

► ಮುಸ್ಲಿಮ್ ವಿದ್ಯಾರ್ಥಿನಿಗಳ ಧಾರ್ಮಿಕ ನಂಬಿಕೆಯನ್ನೂ ಗೌರವಿಸಿ

► ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಮಾಜಿ ಮೇಯರ್ ಕೆ ಅಶ್ರಫ್

ಮಂಗಳೂರು:ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಭುಗಿಲೆದ್ದ ಸ್ಕಾರ್ಫ್ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ರಚಿಸಿದ ಮುಸ್ಲಿಂ ಮುಖಂಡರ ವೇದಿಕೆಯ ತುರ್ತು ಸಭೆಯು ಇಂದು ಸಂಜೆ ಬಂದರಿನ ಕಛೇರಿಯೊಂದರಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಪತ್ರಿಕಾಗೋಷ್ಟಿ ನಡೆಸಿದ ಹಿನ್ನಲೆಯಲ್ಲಿ, ಅಲ್ಲಿ ಉಲ್ಲೇಖಿಸಿದ ಕೆಲವೊಂದು ಸತ್ಯಕ್ಕೆ ದೂರವಾದ ವಿಚಾರದ ಆಧಾರಲ್ಲಿ ಗಂಭೀರ ಚರ್ಚೆಗಳು ನಡೆಯಿತು.ಪ್ರಾಂಶುಪಾಲರು ನೀಡಿದ ಹೇಳಿಕೆಯಂತೆ ತಾವು ಧರಿಸುವ ವಸ್ರ್ತಧಾರಣೆಯು ತಮ್ಮ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಇರುವುದರಿಂದ ಯಾರಿಗೂ ಇದರಿಂದ ತೊಂದರೆ ಇಲ್ಲ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಅವರ ಧರ್ಮದ ನಂಬಿಕೆಯನ್ನು ಪಾಲಿಸಲು ಅವಕಾಶ ಇಲ್ಲ. ಅಲ್ಲದೆ ವಿದ್ಯಾರ್ಥಿಗಳಿಗೆ ದಾಖಲಾತಿ ಸಂಧರ್ಭದಲ್ಲಿ ಡೈರಿಯನ್ನು ನೀಡದೇ, ಯಾವುದೇ ಲಿಖಿತ ರೂಪದಲ್ಲಿ ಪಡೆದಿಲ್ಲ ಹಾಗು ಅಸಂವಿಧಾನಿಕವಾದಂತಹ ಯಾವುದೇ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರ ಶಿಕ್ಷಣ ಸಂಸ್ಥೆಗಳಿಗೆ ಇಲ್ಲ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಧಾರ್ಮಿಕ ಹಕ್ಕುಗಳನ್ನು ಅನುಸರಿಸಲು ಅವಕಾಶ ಮಾಡಿಕೊಡಬೇಕು ಮತ್ತು ಕೇವಲ ಕೆಲವು ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ, ಆದರೆ ಬಹುತೇಕ ವಿದ್ಯಾರ್ಥಿಗಳು ತಮ್ಮ ಹಕ್ಕಿಗೋಸ್ಕರ ನಿರಂತರ ಪ್ರಯತ್ನಿಸುತ್ತಿದ್ದಾರೆ. ಪ್ರಾಂಶುಪಾಲರು ತಮ್ಮ ಕಾಲೇಜಿನ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದುದರಿಂದ ವಿದ್ಯಾರ್ಥಿಗಳ ಬೇಡಿಕೆಯನ್ನ ಈಡೇರಿಸಿ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ನಡೆಸಿದ್ದೇವೆ ಎಂದು ಮುಸ್ಲಿಂ ಮುಖಂಡರ ವೇದಿಕೆಯ ಸಭೆಯಲ್ಲಿ ಅಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್‍ರವರು ತಿಳಿಸಿದ್ದಾರೆ. ಸಭೆಯಲ್ಲಿ ಮುಸ್ಲಿಂ ಮುಖಂಡರ ವೇದಿಕೆ ಉಪಸಂಚಾಲಕ ಸುಹೈಲ್ ಖಂದಕ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಫ್ಸೀರ್, ಸದಸ್ಯರಾದ ಜಾಫರ್ ಸಾಧಿಕ್ ಫೈಝಿ, ನಯಾಝ್ ಉಳ್ಳಾಲ, ಅತಾವುಲ್ಲಾ ಜೋಕಟ್ಟೆ, ನಝೀರ್ ಬಂದರ್,ಮೊಹಮ್ಮದ್ ಮೋನು ಕುದ್ರೋಳಿ,ಮುಸ್ತಫಾ ಬಂದರ್,ಹಿದಾಯತುಲ್ಲ ಸುರತ್ಕಲ್, ಇಮ್ರಾನ್ ಪಿ ಜೆ ಮೊದಲಾದವರು ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group