ರಾಷ್ಟ್ರೀಯ ಸುದ್ದಿ

ಮತ್ತೊಮ್ಮೆ ಇತಿಹಾಸದ ಅಲ್ಪಜ್ಞಾನ ಪ್ರದರ್ಶಿಸಿದ ಪ್ರಧಾನ ಮಂತ್ರಿ!!

ವರದಿಗಾರ(29-06-2018): ಪ್ರಧಾನ ಮಂತ್ರಿಯವರ ಉಚ್ಚಾರಣೆ, ಫೊಟೋ ಪೋಸ್, ತಪ್ಪಾದ ಅಂಕಿ ಅಂಶಗಳು, ಇತಿಹಾಸದ ಜ್ಞಾನ ಆಗಾಗ ವಿರೋಧಿಗಳ ಹಾಸ್ಯಕ್ಕೀಡಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಅವರ ಇತಿಹಾಸದ ಜ್ಞಾನ ಮತ್ತೆ ಹಾಸ್ಯಕ್ಕೀಡಾಗಿದೆ.

620ನೇ ವಾರ್ಷಿಕವನ್ನಾಚರಿಸಲು ಉತ್ತರ ಪ್ರದೇಶದ ಮಘರ್ ನಲ್ಲಿರುವ ಸಂತ ಕಬೀರರ ಸಮಾಧಿಗೆ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿ ‘ಚಾದರ್’ ಅರ್ಪಿಸಿ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಇತರ ಬಿಜೆಪಿ ನಾಯಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮೋದಿ ಸಂತ ಕಬೀರರ ಶ್ರೇಷ್ಟತೆಯನ್ನು ವರ್ಣಿಸುತ್ತಾ “ನಿರ್ವಾಣದ ಈ ಪ್ರದೇಶದ ಸಂತನನ್ನು ನಾನು ಮತ್ತೊಮ್ಮೆ ವಂದಿಸುತ್ತೇನೆ. ಸಂತ ಕಬೀರ್, ಗುರುನಾನಕ್ ಹಾಗೂ ಬಾಬಾ ಗೋರಕ್ ನಾಥ್ ಇಲ್ಲಿ ಒಟ್ಟಾಗಿ ಕುಳಿತು ಆಧ್ಯಾತ್ಮಿಕತೆಯ ಬಗ್ಗೆ ಚರ್ಚಿಸಿದ್ದರು” ಎಂದು ಹೇಳಿದರು.

ಮೋದಿ ಇತಿಹಾಸದ ಅಸ್ಪಷ್ಟತೆಯನ್ನು ಗಮನಿಸಿದ ಪ್ರಜ್ಞಾವಂತರು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟೀಕಿಸಿದರು.

ಈ ಮೂವರು ಆಧ್ಯಾತ್ಮಿಕ ಗುರುಗಳು ಬೇರೆ ಬೇರೆ ಶತಮಾನಗಳಲ್ಲಿ ಬದುಕಿದ್ದರು.
ಬಾಬಾ ಗೋರಕ್ ನಾಥ್ 11ನೇ ಶತಮಾನದಲ್ಲಿ ಜನಿಸಿದ್ದರು. 120ವರ್ಷಗಳ ಕಾಲ ಜೀವಿಸಿದ್ದ ಸಂತ ಕಬೀರ್ 14ನೇ ಶತಮಾನದ ಕೊನೆಯಲ್ಲಿ ಜನಿಸಿದ್ದರು(1398-1518). ಗುರುನಾನಕ್ 15 ಹಾಗೂ 16ನೇ ಶತಮಾನದಲ್ಲಿ ಜೀವಿಸಿದ್ದರು(1569-1539). ಸಂತ ಕಬೀರ್ ಹಾಗೂ ಗುರುನಾನಕ್ ಭೇಟಿಯಾಗುವ ಸಂಭವವಿದ್ದರೂ ಅವರಿಬ್ಬರೂ ಒಟ್ಟಾಗಿ ಕುಳಿತು ಅಧ್ಯಾತ್ಮಿಕತೆಯನ್ನು ಚರ್ಚಿಸಿದ್ದಾರೆ ಎನ್ನುವುದು ಅತಿಶಯವಾಗಬಹುದು.

ಇದೇ ಮೊದಲಲ್ಲ!!

ಇತಿಹಾಸದ ಬಗ್ಗೆ ಮಾತನಾಡುವಾಗ ಮೋದಿ ಬೆರಳು ಕಚ್ಚುವಂತೆ ಮಾಡಿದ್ದು ಇದೇ ಮೊದಲಲ್ಲ. 2013ರಲ್ಲಿ ಬಿಹಾರದಲ್ಲಿ ರಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ‘ಬಿಹಾರದ ಶಕ್ತಿ’ಯನ್ನು ವರ್ಣಿಸುತ್ತಾ ಅಶೋಕ ಚಕ್ರವರ್ತಿ, ಪಾಟಲೀಪುತ್ರ,ನಲಂದಾ ಹಾಗೂ ತಕ್ಷಿಲಾವನ್ನು ಪ್ರಸ್ತಾಪಿಸಿದ್ದರು. ಆದರೆ, ತಕ್ಷಿಲಾ ಪಂಜಾಬಿನ ಭಾಗವಾಗಿತ್ತು(ಇಂದಿನ ಪಾಕಿಸ್ತಾನ), ಅದು ಬಿಹಾರದಲ್ಲಿಲ್ಲ.

ಅಮೇರಿಕಾದಲ್ಲಿ ಭಾಷಣವೊಂದರಲ್ಲಿ ಮೋದಿ ಕೋನಾರ್ಕ್ ನ ಸೂರ್ಯ ಮಂದಿರವು 2000 ವರ್ಷಗಳಷ್ಟು ಪುರಾತನವೆಂದಿದ್ದರು. ಆದರೆ, ಪ್ರಸಿದ್ಧ ಸೂರ್ಯ ಮಂದಿರವು ಕೇವಲ 700 ವರ್ಷಗಳಷ್ಟು ಪುರಾತನವಾಗಿದೆ.

“ಗುಪ್ತ ಸಾಮ್ರಾಜ್ಯದ ಬಗ್ಗೆ ಮಾತನಾಡುವಾಗ ಚಂದ್ರಗುಪ್ತರ ರಾಜಕೀಯ ನೆನಪಾಗುತ್ತಿದೆ ” ಎಂದೂ ಮೋದಿ ಹೇಳಿದ್ದರು. ಆದರೆ, ರಾಜಕೀಯದಲ್ಲಿ ನೆನಪಿಸಲ್ಪಡುತ್ತಿರುವ ಚಂದ್ರಗುಪ್ತ, ಮೌರ್ಯ ಸಾಮ್ರಾಜ್ಯಕ್ಕೆ ಸೇರಿದವನಾಗಿದ್ದು, ಎರಡನೆಯ ಚಂದ್ರಗುಪ್ತ ಗುಪ್ತ ಸಾಮ್ರಾಜ್ಯದವನಾಗಿದ್ದಾನೆ.

To Top
error: Content is protected !!
WhatsApp chat Join our WhatsApp group