Uncategorized

ದೇವರು ನನ್ನಿಂದ ಜನಸೇವೆಯನ್ನು ಮಾಡಿಸಲು ಅಧಿಕಾರ ಕೊಟ್ಟಿದ್ದಾನೆ, ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ: ಸಿಎಂ ಕುಮಾರಸ್ವಾಮಿ

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಘೋಷಣೆ ಕೂಗಿದವರು ಮತ ನೀಡಲು ಮರೆತರು’

ವರದಿಗಾರ (ಜೂ.26): ”ದೇವರು ನನ್ನಿಂದ ಜನಸೇವೆಯನ್ನು ಮಾಡಿಸಲು ಅಧಿಕಾರ ಕೊಟ್ಟಿದ್ದಾನೆ. ನನಗೆ ದೇವರು ಕೊಟ್ಟ ಅಧಿಕಾರ ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅವರು ನಗರದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕಾಸಿಯಾ ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರ’ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡುತ್ತಾ, ”ದೇವರು ನನ್ನಿಂದ ಜನಸೇವೆಯನ್ನು ಮಾಡಿಸಲು ಅಧಿಕಾರ ಕೊಟ್ಟಿದ್ದಾನೆ. ಹಾಗಾಗಿ ಅಧಿಕಾರದಲ್ಲಿ ಇರುವವರೆಗೆ ಒಳ್ಳೆಯ ಕೆಲಸ ಮಾಡುವುದರತ್ತ ಮಾತ್ರ ನನ್ನ ಗಮನ,” ಎಂದು ಅವರು ಹೇಳಿದ್ದಾರೆ.

”ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ಬಯಕೆಯಾಗಿತ್ತು. ನಾನು ಹೋದ ಕಡೆಗಳಲ್ಲೆಲ್ಲಾ ಮುಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಂದು ಜನರು ಘೋಷಣೆಗಳನ್ನು ಕೂಗುತ್ತಿದ್ದರು. ಆದರೆ  ಮತಗಳನ್ನು ನೀಡಲು ಮರೆತರು. ಅವರ ಮನದಾಳದ ಆಶಯದಂತೆ ದೇವರು ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದ. ಆದರೆ ಸಂಪೂರ್ಣ ಸರಕಾರ ರಚನೆಗೆ ಅವಕಾಶ ನೀಡಲಿಲ್ಲ. ಹಾಗಾಗಿ ನಾನು ಅದೃಷ್ಟವಂತ ರಾಜಕಾರಣಿ,” ಎಂದು ಹೇಳಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group