ರಾಜ್ಯ ಸುದ್ದಿ

ಗೋ-ಭಯೋತ್ಪಾದನೆಯನ್ನು ಕೊನೆಗೊಳಿಸಲು ಪ್ರತಿರೋಧವೊಂದೇ ಮುಸಲ್ಮಾನರಿಗಿರುವ ಅಂತಿಮ ಆಯ್ಕೆ !!! -ರಿಯಾಝ್ ಫರಂಗಿಪೇಟೆ

ವರದಿಗಾರ (ಜೂ.21): ಜೂನ್ 20 ರಂದು ಉತ್ತರ ಪ್ರದೇಶದ ಹಾಪುರ್ ನಲ್ಲಿ ಗೋ-ಭಯೋತ್ಪಾದಕರ ಅಟ್ಟಹಾಸ ಮತ್ತೆ ಮುಂದುವರಿದಿದ್ದು ಹಾಪುರ್ ನ ಪಿಲಖುವಾ ಗ್ರಾಮದಲ್ಲಿ ಅಕ್ರಮ ಗೋ ಸಾಗಾಟದ ಆರೋಪದಲ್ಲಿ 45 ವರ್ಷ ಪ್ರಾಯದ ಖಾಸಿಂ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು, 65 ವರ್ಷ ಪ್ರಾಯದ ಸಮೀವುದ್ದೀನ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯ ಬಗ್ಗೆ ಖಂಡಿಸುತ್ತಾ ಮಾಧ್ಯಮದ ಜೊತೆ ಮಾತನಾಡಿದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಹಾಪುರ್ ನಲ್ಲಿ ನಡೆದ ಘಟನೆಯನ್ನು ಪೋಲೀಸರು  ಬೈಕ್ ಡಿಕ್ಕಿಯ ಕಾರಣ ನಡೆದ ಹಲ್ಲೆ ಎಂದು ಪ್ರಕರಣವನ್ನು ತಿರುಚಿ 25 ಮಂದಿಯ ಮೇಲೆ ಕೇಸು ದಾಖಲಿಸಿ ರಾಕೇಶ್ ಸಿಸೋಡಿಯಾ ಮತ್ತು ಯುಧಿಷ್ಠಿರ ಸಿಂಗ್ ಎಂಬವನನ್ನು ಬಂಧಿಸಿ ಕೈತೊಳೆದು ಕೊಂಡಿರುವುದು ಭಾರತದ ಕಾನೂನಿಗೆ ಮಾಡಿದ ಅಪಚಾರವಾಗಿದೆ ಮತ್ತು ಮುಖ್ಯಮಂತ್ರಿ ಯೋಗಿ ಈ ಘಟನೆಯ ಬಗ್ಗೆ ತುಟಿ ಬಿಚ್ಚದೆ  ಮೌನಂ ಸಮ್ಮತಿ ಲಕ್ಷಣಂ ಅಂದಿರುವುದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನವಾಗಿರುತ್ತದೆ. ಏಕೆಂದರೆ ಅವರು ಕೇವಲ ಸಂಘಿಗಳಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ ಬದಲಾಗಿ ಇಡೀ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.

ಉತ್ತರ ಪ್ರದೇಶದಲ್ಲಿ ಗೋ-ರಾಜಕಾರಣ ಹಾಗೂ ಗೋ-ಭಯೋತ್ಪಾದನೆ ಅವ್ಯಾಹತವಾಗಿ ನಡೆಯುತ್ತಿದೆ. ಚುನಾವಣಾ ಪ್ರಚಾರದಲ್ಲಿ ಜನರ ಮುಂದಿಟ್ಟ ಜುಮ್ಲಾಗಳು ಚರ್ಚೆಯಾಗದಂತೆ ಗಮನ ತಿರುಗಿಸಲು ಹಾಗೂ ತನ್ನೆಲ್ಲ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಚುಕ್ಕಾಣಿಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ‘ಗೋಮುಖ’ವನ್ನು ಧರಿಸಿದೆ. ದನವನ್ನು ಮುಂದಿಟ್ಟುಕೊಂಡು ಗೋವು, ಮಾತೆ ಎಂಬೆಲ್ಲ ಭಾವನೆಗಳನ್ನು ಉದ್ರೇಕಿಸಿ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ಪ್ರಹಾರ ನಡೆಸಿದೆ. ದೇಶದ ಪ್ರಜ್ಞಾವಂತರು ಮತ್ತು ಸಂವೇದನಾಶೀಲ ವರ್ಗಗಳು ಕೇಂದ್ರ ಸರ್ಕಾರದ ವೈಫಲ್ಯಗಳ ಜಿಜ್ಞಾಸೆ ನಡೆಸಲು ಸಮಯ ಕೊಡದೆ ಗೋ-ಚರ್ಚೆಯಲ್ಲೇ ಮುಳುಗುವಂಥ ಸನ್ನಿವೇಶವನ್ನು ನಿರ್ಮಿಸಲಾಗಿದೆ.

ಕೇಂದ್ರದಲ್ಲಿ ಬಿಜೆಪಿ ಆಡಳಿತ ಸೂತ್ರ ಹಿಡಿಯಲು ಗೋವನ್ನು ಕೂಡ ಮೆಟ್ಟಿಲಾಗಿ ಬಳಸಿಕೊಂಡಿತ್ತು. ಹೆಚ್ಚೂಕಡಿಮೆ ದಶಕದಿಂದೀಚೆಗೆ ಗೋರಾಜಕಾರಣ ಬಿಜೆಪಿಯ ಆಯುಧಗಳಲ್ಲಿ ಒಂದಾಗಿತ್ತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅದು ಗುರಾಣಿಯಾಗಿ ಬಳಕೆಯಾಗುತ್ತಿದೆ. ಈ ನಡುವೆ, ಬಿಜೆಪಿ ಕೇಂದ್ರ ಸರ್ಕಾರದ ನೇತೃತ್ವ ವಹಿಸಿಕೊಂಡನಂತರ – ಕಳೆದ ಮೂರು ವರ್ಷಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಗೋ ಸಂಬಂಧಿತ ಗಲಭೆ, ದಾಳಿ, ಕೊಲೆಗಳು ನಡೆದಿವೆ. ಆದರೆ ಎಲ್ಲಾ ಸಂದರ್ಭಗಳಲ್ಲೂ ಕೂಡಾ ಆಡಳಿತ ವ್ಯವಸ್ಥೆ ಮತ್ತು ಪೋಲೀಸ್ ಇಲಾಖೆಯು ಗೋ-ಭಯೋತ್ಪಾದಕರ ಪರವಾಗಿ ನಿಂತಿರುವುದನ್ನು ನಾವು ಕಂಡಿದ್ದೇವೆ.ಆದ್ದರಿಂದ ಇನ್ನು ಮುಂದೆ ಉತ್ತರ ಪ್ರದೇಶದ ಮತ್ತು ಇತರ ಪ್ರದೇಶಗಳಲ್ಲಿ ಗೋ-ಭಯೋತ್ಪಾದಕರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಮುಸಲ್ಮಾನರು ಪ್ರತಿರೋಧಕ್ಕೆ ಸಜ್ಜಾಗುವ ವರೆಗೂ ಇದೇ ರೀತಿಯ ನರಕ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿರೋಧವೊಂದೇ ಮುಸಲ್ಮಾನರಿಗಿರುವ ಅಂತಿಮ ಆಯ್ಕೆ ಎಂದು ಅವರು ಅಭಿಪ್ರಾಯಪಟ್ಟರು.

To Top
error: Content is protected !!
WhatsApp chat Join our WhatsApp group