ಸುತ್ತ-ಮುತ್ತ

ಸಂಸ್ಥಾಪನಾ ದಿನವನ್ನು ಮಾದರಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟವಾಗಿ ಆಚರಿಸಿದ ಎಸ್.ಡಿ.ಪಿ.ಐ

ವರದಿಗಾರ (ಜೂ.21): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ ಸಂಸ್ಥಾಪನಾ ದಿನ ಹಾಗೂ ಪಕ್ಷವು ತನ್ನ 10 ವರ್ಷಗಳನ್ನು ಪೂರೈಸಿದ್ದು ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆಯವರ ನೇತೃತ್ವದ ನಿಯೋಗವು ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ಮುಖ್ಯಸ್ಥೆ ಹಿಲ್ಡಾ ರಾಯಪ್ಪನ್ ರವರೊಂದಿಗೆ ಸಮಾಲೋಚನೆ ನಡೆಸಿ ನಂತರ ಗೋರಿಗುಡ್ಡೆಯ ಪ್ರಜ್ಞಾ ಕುಡುಕರ ಪರವರ್ತನಾ ಕೇಂದ್ರ ಮತ್ತು ಬಿಜೈಯ ಚಿಣ್ಣರ ಆಶ್ರಯ ಕೇಂದ್ರಕ್ಕೆ ಭೇಟಿ ಕೊಟ್ಟು ಮಕ್ಕಳೊಂದಿಗೆ ಕೆಲ ಹೊತ್ತು ಅವರ ನೋವು ನಲಿವುನೊಂದಿಗೆ ಬೆರೆತು ಮಕ್ಕಳಿಗೆ ಸಿಹಿ ತಿಂಡಿಗಳನ್ನು ಹಂಚಿ ತಮ್ಮ ಸಂಸ್ಥಾಪನಾ ದಿನವನ್ನು ಆಚರಿಸಿ ಮಾದರಿಯಾಗಿದೆ.

ಸಂಸ್ಥಾಪನಾ ದಿನದ ಪ್ರಯುಕ್ತ ಕುಡುಕರ ಪರಿವರ್ತನಾ ಕೇಂದ್ರ ಮತ್ತು ಚಿಣ್ಣರ ಆಶ್ರಯ ಕೇಂದ್ರಕ್ಕೆ ಈ ದಿನದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದೆ.
ನಿಯೋಗದಲ್ಲಿ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್,ಎಸ್ ಡಿ ಟಿ ಯು ರಾಜ್ಯಾಧ್ಯಕ್ಷ ಜಲೀಲ್.ಕೆ, ಜಿಲ್ಲಾ ಪ್ರ.ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಜಿಲ್ಲಾ ಕಾರ್ಯದರ್ಶಿ ಆಶ್ರಫ್ ಮಂಚಿ, ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಗೂಡಿನಬಳಿ ಇನ್ನಿತರ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.

ಮಾದರಿ ಕಾರ್ಯಕ್ರಮಕ್ಕೆ ಸಂಸ್ಥೆ ಎಸ್.ಡಿ.ಪಿ.ಐ ನಾಯಕರನ್ನು ಇದೇ ಸಂದರ್ಭ ಅಭಿನಂದಿಸಿದೆ.

To Top
error: Content is protected !!
WhatsApp chat Join our WhatsApp group