ಸಾಮಾಜಿಕ ತಾಣ

ಮುಸ್ಲಿಂ ವಿರೋಧಿ ಗ್ರಾಹಕಿಯ ಮುಂದೆ ಮಂಡಿಯೂರಿದ ಏರ್’ಟೆಲ್; ಟ್ವಿಟ್ಟರಿಗರ ಅಕ್ರೋಶದ ಬಳಿಕ ಸ್ಪಷ್ಟನೆ!!

ವರದಿಗಾರ(19-06-2018): ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲೂ ಗ್ರಾಹಕ ಸೇವೆಯ ಸೌಲಭ್ಯವನ್ನು ಒದಗಿಸುತ್ತಿವೆ. ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಗಳಲ್ಲೊಂದಾದ ಏರ್’ಟೆಲ್ ತನ್ನ ಗ್ರಾಹಕರ ಸೇವೆಗಾಗಿ ಪ್ರಾರಂಭಿಸಿದ ಟ್ವಿಟ್ಟರ್ ಖಾತೆಯಲ್ಲಿ ಗ್ರಾಹಕರ ದೂರುಗಳನ್ನು ಪರಿಶೀಲಿಸುತ್ತದೆ.

ನಿನ್ನೆ ಪೂಜಾ ಸಿಂಗ್(@pooja303singh) ಎನ್ನುವ ಗ್ರಾಹಕಿಯೊಬ್ಬಳು ಏರ್’ಟೆಲ್ ಡಿಟಿಎಚ್ ಸೇವೆಯಲ್ಲಿ ತನಗುಂಟಾದ ಅಸಂತೋಷವನ್ನು ತನ್ನ ಟ್ವಿಟ್ಟರ್ ಖಾತೆಯ ಮೂಲಕ ಹಂಚಿದ್ದಳು.

https://twitter.com/pooja303singh/status/1008599969077612544?ref_src=twcamp%5Ecopy%7Ctwsrc%5Eandroid%7Ctwgr%5Ecopy%7Ctwcon%5E7090%7Ctwterm%5E3

ತಕ್ಷಣವೇ ಉತ್ತರಿಸಿದ ಏರ್’ಟೆಲ್ ಸಿಬ್ಬಂದಿ ಶೋಯೆಬ್ ಆಕೆಯ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದನು.

ಆದರೆ, ಟ್ವಿಟ್ಟರ್ ಖಾತೆಯನ್ನು ತನ್ನ ವಿಷಪೂರಿತ ಟ್ವೀಟ್ ಗಳಿಗಾಗಿಯೇ ಮೀಸಲಿಟ್ಟಿದ್ದ ಪೂಜಾ ಸಿಂಗ್ ‘ಸಿಬ್ಬಂದಿ ಮುಸ್ಲಿಂ ಆದ ಕಾರಣ ತನಗೆ ಆತನ ಮೇಲೆ ಭರವಸೆ ಇಲ್ಲವೆಂದೂ, ಕುರಾನ್ ಗ್ರಾಹಕ ಸೇವೆಗಾಗಿ ಬೇರೆಯೇ ನಿಯಮಗಳನ್ನು ಹೊಂದಿರಬಹುದು, ಆದ್ದರಿಂದ ತನ್ನ ಸಮಸ್ಯೆಯನ್ನು ಬಗೆಹರಿಸಲು ಹಿಂದೂ ಸಿಬ್ಬಂದಿಯನ್ನು ನೇಮಿಸಬೇಕೆಂದು ಬೇಡಿಕೆಯಿಟ್ಟಳು.

https://twitter.com/pooja303singh/status/1008642898987048961?ref_src=twcamp%5Ecopy%7Ctwsrc%5Eandroid%7Ctwgr%5Ecopy%7Ctwcon%5E7090%7Ctwterm%5E3

ಆಕೆಯ ಕೋಮುವಾದಿ ಬೇಡಿಕೆಯ ಮುಂದೆ ಮಂಡಿಯೂರಿದ ಏರ್’ಟೆಲ್ ತಕ್ಷಣವೇ ಗಗನ್ ಜೋತ್ ಎಂಬ ಸಿಬ್ಬಂದಿಯನ್ನು ನೇಮಿಸಿತು.

ಇದನ್ನು ಗಮನಿಸಿದ ಟ್ವಿಟ್ಟರಿಗರು ಏರ್’ಟೆಲ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅಕ್ರೋಶ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚಾಗುವುದನ್ನು ಹಾಗೂ ಆಕ್ರೊಶಿತ ಬಳಗದಲ್ಲಿ ರಾಜಕಾರಣಿಗಳು, ಪತ್ರಕರ್ತರನ್ನೊಳಗೊಂಡಂತೆ ಹಲವು ಪ್ರಮುಖ ವ್ಯಕ್ತಿಗಳು ಸೇರುವುದನ್ನು ಗಮನಿಸಿ, ವಿವಾದದ ಗಂಭೀರತೆಯನ್ನು ಅರಿತು 5 ಗಂಟೆಗಳ ಬಳಿಕ ಸ್ಪಷ್ಟನೆ ನೀಡಿತು.

“ಏರ್’ಟೆಲ್ ಜಾತಿ ಹಾಗೂ ಧರ್ಮದ ಆಧಾರದಲ್ಲಿ ಗ್ರಾಹಕರು, ಉದ್ಯೋಗಿಗಳು ಹಾಗೂ ಪಾಲುದಾರರ ನಡುವೆ ಭಿನವಾಗಿರುವುದಿಲ್ಲ. ಅದೇ ರೀತಿ ನಡೆಯಲು ನಾವು ನಿಮ್ಮನ್ನು ಒತ್ತಯಿಸುತ್ತಿದ್ದೇವೆ. ಶೋಯೆಬ್ ಹಾಗೂ ಗಗನ್ ಜೋತ್ ಏರ್’ಟೆಲ್ ಗ್ರಾಹಕ ಸೇವಾ ತಂಡದ ಸದಸ್ಯರಾಗಿದ್ದಾರೆ”

ಕೋಮುವಾದಿಗಳ ಈ ರೀತಿಯ ಚೇಷ್ಟೆ ಇದೇ ಮೊದಲಲ್ಲ. ಇದಕ್ಕಿಂತ ಮುನ್ನ ಈ ರೀತಿಯ ಟ್ವೀಟ್ ಮಾಡಿದ್ದ ಕೋಮುವಾದಿಗಳಿಗೆ ಓಲಾ, ಉಬರ್ ಸಂಸ್ಥೆಗಳು ಟ್ವಿಟ್ಟರಿನಲ್ಲಿಯೇ ಮಂಗಳಾರತಿ ಮಾಡಿದ್ದವು. ಆದರೆ, ಏರ್’ಟೆಲ್ ಸಂಸ್ಥೆಯು ಕೋಮುವಾದಿಯೊಬ್ಬಳ ಮುಂದೆ ಮಂಡಿಯೂರಿದ್ದು ವಿಷಾದನೀಯ. ಸ್ಪಷ್ಟನೆ ನೀಡಲು ಏರ್’ಟೆಲ್ ತೆಗೆದುಕೊಂಡ ಐದು ಗಂಟೆಗಳ ಸುಧೀರ್ಘ ಸಮಯವೇ ಸಂಸ್ಥೆಯ ಮೌಲ್ಯಗಳ ಬಗ್ಗೆ ವಿವರಿಸುತ್ತಿದೆ.

To Top
error: Content is protected !!
WhatsApp chat Join our WhatsApp group