ರಾಜ್ಯ ಸುದ್ದಿ

ಪ್ರಗತಿಪರರ ಹತ್ಯೆಗೆ ಕೇಂದ್ರ ಸರಕಾರದ ಪರೋಕ್ಷ ಬೆಂಬಲವಿದೆ: ಪ್ರೊ.ಮಹೇಶ್ ಚಂದ್ರಗುರು

ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಹತ್ಯೆ ಹಿಂದೆ ಹಿಂದುತ್ವವಾದಿಗಳ ಕೈವಾಡ

‘ಗೌರಿ ಹತ್ಯೆಯ ಹಿಂದೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಇರಬಹುದು’

ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ನಳೀನ್‍ ಕುಮಾರ್ ಕಟೀಲ್ ಅವಿವೇಕಿಗಳು

ವರದಿಗಾರ (ಜೂ.14): ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರಗತಿಪರರ ಹತ್ಯೆ ಹಿಂದೆ ಹಿಂದುತ್ವವಾದಿಗಳ ಕೈವಾಡವಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಆರೋಪಿಸಿದ್ದಾರೆ.

ಅವರು ಮೈಸೂರಿನ ತಮ್ಮ ನಿವಾಸದಲ್ಲಿ ವರದಿಗಾರರೊಂದಿಗೆ ಈ ಬಗ್ಗೆ ಮಾತನಾಡುತ್ತಾ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಹತ್ಯೆಗೆ ಕೇಂದ್ರ ಸರಕಾರದ ಪರೋಕ್ಷ ಬೆಂಬಲವಿದೆ. ಎನ್.ಡಿ.ಎ.ಸರಕಾರ ಬಂದ ಮೇಲೆ ಪ್ರಗತಿಪರರ ಹತ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಗೌರಿ ಹತ್ಯೆಯ ಹಂತಕರೇ ಕಲಬುರ್ಗಿ, ದಾಬೋಲ್ಕರ್, ಪನ್ಸಾರೆಯನ್ನು ಹತ್ಯೆ ಮಾಡಿರಬಹುದು. ಈ ಹತ್ಯೆಗಳ ಹಿಂದೆ ಹಿಂದೂತ್ವವಾದಿಗಳ ಕೈವಾಡವಿದೆ. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಇರಬಹುದು, ಅಥವಾ ಹಿಂದುತ್ವವಾದವನ್ನು ಬಿತ್ತುತ್ತಿರುವ ಸಂಘಟನೆಗಳೇ ಇದರ ಹಿಂದೆ ಇರಬಹುದು ಎಂದ ಅವರು, ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ನಳೀನ್‍ ಕುಮಾರ್ ಕಟೀಲ್ ಅವಿವೇಕಿಗಳು. ಅವರಿಗೂ ಗೌರಿ ಹಂತಕರಿಗೂ ಸಂಬಂಧವಿದೆ ಎಂದೆನಿಸುತ್ತದೆ ಎಂದು ಆರೋಪಿಸಿದರು.

ನನಗೆ ಭದ್ರತೆ ನೀಡಿ ಎಂದು ಯಾರ ಬಳಿಯೂ ಅರ್ಜಿ ಹಾಕಿರಲಿಲ್ಲ, ಆದರೆ ಸರಕಾರವೇ ಭದ್ರತೆ ಒದಗಿಸಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಸರಕಾರವು ಇತ್ತೀಚೆಗೆ ಒದಗಿಸಿರುವ ಭದ್ರತೆಯ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.

To Top
error: Content is protected !!
WhatsApp chat Join our WhatsApp group