ರಾಜ್ಯ ಸುದ್ದಿ

‘ಜನರ ಸೇವೆ ಮಾಡಲು ಸಚಿವ ಸ್ಥಾನವೇ ಬೇಕೆಂದೇನೂ ಇಲ್ಲ; ಬೇಕಾದಷ್ಟು ಬೇರೆ ದಾರಿಗಳೂ ಇವೆ’- ಶಾಮನೂರು ಶಿವಶಂಕರಪ್ಪ

ವರದಿಗಾರ (ಜೂ.9):  ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಾನೇನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ‘ಸಚಿವ ಸ್ಥಾನ ನೀಡುವಂತೆ ನಾನು ಯಾರನ್ನೂ ಕೇಳಿಕೊಂಡಿಲ್ಲ. ಈ ವಿಷಯವಾಗಿ ನನ್ನೊಂದಿಗೆ ಪಕ್ಷದ ಯಾವುದೇ ನಾಯಕರೂ ಚರ್ಚಿಸಿಲ್ಲ. ಜನರ ಸೇವೆ ಮಾಡಲು ಸಚಿವ ಸ್ಥಾನವೇ ಬೇಕೆಂದೇನೂ ಇಲ್ಲ; ಬೇಕಾದಷ್ಟು ಬೇರೆ ದಾರಿಗಳೂ ಇವೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ‘ನನಗೆ ರಾಜಕೀಯ ಹವ್ಯಾಸವಷ್ಟೇ! ಇದನ್ನು ಬಿಟ್ಟು ಮಾಡಲು ಬೇಕಾದಷ್ಟು ಕೆಲಸಗಳಿವೆ. ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಸಚಿವ ಸ್ಥಾನ ನೀಡದಿದ್ದರೆ, ಶಾಸಕನಾಗಿಯೇ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ತಮಗೆ ಸಚಿವ ಸ್ಥಾನ ನೀಡುವಂತೆ ಕೆಲ ಸ್ವಾಮೀಜಿಗಳು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದಾಗ, ‘ಸ್ವಾಮೀಜಿ ಶಿಫಾರಸು ಮಾಡಿದರೆ ಆ ಸ್ಥಾನ ನನ್ನಿಂದ ಇನ್ನಷ್ಟು ದೂರ ಹೋಗಲಿದೆ. ಸಚಿವ ಸ್ಥಾನ ಬಂದರೆ ಬರಲಿ; ಇಲ್ಲ ಎಂದರೆ ಹಾಗೆಯೇ ಕೆಲಸ ಮಾಡುತ್ತೇನೆ’ ಎಂದು ನಗುತ್ತಾ ಅವರು ಹೇಳಿದ್ದಾರೆ.

‘ಬಿಜೆಪಿಯವರು ಕಾಂಗ್ರೆಸ್‌‌ನ ಅತೃಪ್ತ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚಿಸುವುದು ಹಗಲು ಕನಸು’ ಎಂದು ಬಿಜೆಪಿಗೆ ಚಾಟಿ ಬೀಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group