ಸುತ್ತ-ಮುತ್ತ

ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ

ವರದಿಗಾರ (ಜೂ.8): ವಾರ್ತಾ ಮತ್ತು ಪ್ರಚಾರ ಇಲಾಖೆ ಮಂಗಳೂರು ಇದರ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ ಅವರಿಗೆ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ಸಿಕ್ಕಿದೆ.

2010 ರಲ್ಲಿ ಚಿಕ್ಕಮಗಳೂರಿನಲ್ಲಿ ವಾರ್ತಾಧಿಕಾರಿ ಆಗಿ ಕೆಲಸ ನಿರ್ವಹಿಸಿದ ಬೈಕಂಪಾಡಿ ಅಬ್ದುಲ್ ಖಾದರ್ ಷಾ 2013 ರಲ್ಲಿ ಉಡುಪಿಗೆ ವರ್ಗಾವಣೆಯಾದರು. ಅಲ್ಲಿ ನಾಲ್ಕು ತಿಂಗಳು ಕರ್ತವ್ಯ ನಿರ್ವಹಿಸಿದ ನಂತರ ಮಂಗಳೂರಿಗೆ ವಾರ್ತಾಧಿಕಾರಿ ಯಾಗಿಯೇ ವರ್ಗಾವಣೆಗೊಂಡರು. 2018 ಅಕ್ಟೋಬರ್ 2ಕ್ಕೆ ಮಂಗಳೂರಿನಲ್ಲಿ ಅವರಿಗೆ ಕರ್ತವ್ಯದ ಐದನೇ ವರ್ಷ.

ಮಂಗಳೂರಿಗೆ ಬಂದು ಅಧಿಕಾರ ವಹಿಸಿದ ನಂತರ ಅವರು ಮೊದಲು ಮಾಡಿದ ಕೆಲಸ ಅಂದರೆ ಹಸ್ತಚಾಲಿತ ಸಂವಹನ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿದ್ದು ಮತ್ತು ಪತ್ರಕರ್ತರೊಂದಿಗೆ ಉತ್ತಮ ಸಂಬಂಧ ಬೆಳೆಸಿ ಕೊಂಡದ್ದು.

ಮಂಗಳೂರಿನಲ್ಲಿ 2013 ರಲ್ಲಿ ಮಾನ್ಯತೆ ಪಡೆದ ಪತ್ರಕರ್ತರ ಸಂಖ್ಯೆ 35 ಮಾತ್ರ ಇತ್ತು ಈಗ ಅದು 55ಕ್ಕೆ ಏರಿದೆ. ಅಲ್ಲದೆ ಪತ್ರಕರ್ತರ ಕಲ್ಯಾಣಕ್ಕಾಗಿ ಅರೋಗ್ಯ ಕಾರ್ಡ್ ಗಳು ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಕೊಟ್ಟ ಒರ್ವ ದಕ್ಷ ಅಧಿಕಾರಿ ಎನ್ನಬಹುದು.

ಮಂಗಳೂರು ಪತ್ರಕರ್ತರಿಗೆ ಅತೀ ಶೀಘ್ರವಾಗಿ ವಾಟ್ಸ್ ಆಪ್ ಮೂಲಕ ಮಾಹಿತಿಗಳು ದಿನದ ಸುದ್ದಿಗಳನ್ನು ಸರಿಯಾದ ಸಮಯಕ್ಕೆ ರವಾನೆ ಮಾಡುವ ವ್ಯವಸ್ಥೆಯನ್ನು ಬಿ.ಎ.ಖಾದರ್ ಷಾ ಸಮರ್ಪಕವಾಗಿ ವ್ಯವಸ್ಥೆಗೊಳಿಸಿ ಪತ್ರಕರ್ತರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.

ಮಂಗಳೂರು ಲೊಕೋಪಯೋಗಿ ಕಟ್ಟಡದ ಎರಡನೇ ಮಹಡಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ವಾರ್ತಾ ಇಲಾಖೆಯನ್ನು ನವೀಕರಣಗೊಳಿಸುವ ಪ್ರಕ್ರಿಯೆ ಆರಂಭಿಸಿದವರು ಖಾದರ್ ಷಾ. ಪ್ರತ್ಯೇಕ ಶೌಚಾಲಯವಿಲ್ಲದ ಕಛೇರಿಗೆ ಅದರ ವ್ಯವಸ್ಥೆಯನ್ನು ಮಾಡುವಲ್ಲಿ ಯಶಸ್ವೀಯಾಗಿದ್ದಾರೆ.

ವಾರ್ತಾ ಇಲಾಖೆಗೆಂದೇ ಪ್ರತ್ಯೇಕ ಕಟ್ಟಡ ಗಾಂಧೀ ಭವನದ ನೀಲಿ ನಕಾಶೆಯನ್ನು ಸಿದ್ಧ ಪಡಿಸಿ ಸ್ಥಳಾನ್ವೇಷಣೆಯಲ್ಲಿದ್ದಾರೆ.

ಅವರ ಬಡ್ತಿಯ ಆದೇಶದ ಪ್ರತಿ ಇನ್ನಷ್ಟೇ ಅವರ ಕೈ ತಲುಪಬೇಕಿದೆ. ಅದರೆ ಬಡ್ತಿಯಾಗಿ ಇಲ್ಲೇ ಉಳಿಯುತ್ತಾರೋ ಬೇರೆಡೆಗೆ ವರ್ಗಾವಣೆಯಾಗುತ್ತಾರೋ ಎಂದು ಕಾದು ನೋಡಬೇಕು.

To Top
error: Content is protected !!
WhatsApp chat Join our WhatsApp group