ರಾಜ್ಯ ಸುದ್ದಿ

ದಲಿತ ನಾಯಕ ಭಾಸ್ಕರ್ ಪ್ರಸಾದ್ ಬಂಧನ : ಎಸ್ ಡಿ ಪಿ ಐ ಖಂಡನೆ

ಬೆಂಗಳೂರು: ದಲಿತ ಮತ್ತು ದಮನಿತ ವರ್ಗಗಳ ಹಕ್ಕುಗಳಿಗಾಗಿ ಸದಾ ಹೋರಾಡುತ್ತಿದ್ದ ಭಾಸ್ಕರ್ ಪ್ರಸಾದ್‍ರವರನ್ನು ಸುಳ್ಳು ಮೊಕದ್ದಮೆ ಹೂಡಿ ಬಂಧಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ‍ರವರು ಖಂಡಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕಾಗಿ ಕಳೆದ ಒಂದು ವಾರಗಳಿಂದ ಭಾಸ್ಕರ್ ಪ್ರಸಾದ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯಕರ ಭಾಷೆಯಲ್ಲಿ ತೇಜೋವಧೆ ಮಾಡಲಾಗುತ್ತಿದ್ದು, ಸುಳ್ಳು ಆರೋಪ ಹೊರಿಸಿ ರಾಜಕೀಯ ಒತ್ತಡ ಹೇರಿ ನಿನ್ನೆ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ. ತೀರಾ ಬಾಲಿಶವಾದ ನೆಪದಲ್ಲಿ ಒಬ್ಬ ದಲಿತ ಹೋರಾಟಗಾರನನ್ನು ಬಂಧಿಸಿರುವುದು ಮತ್ತು ಮಾನಹಾನಿ ಮಾಡಿರುವುದು ಖೇದಕರ. ಪ್ರಗತಿಪರರು ಈ ವಿಷಯದಲ್ಲಿ ಸಂಯಮ ಪಾಲಿಸಬೇಕಾಗಿತ್ತು. ಇಬ್ಬರು ಹೋರಾಟಗಾರರ ಪರ ವಿರೋಧ ಆರೋಪಗಳನ್ನು ರಾಜಿ ಪಂಚಾಯಿತಿಯಲ್ಲಿ ಪರಿಹರಿಸಬಹುದಾಗಿತ್ತು. ಅಹಂ ಮತ್ತು ಹಠಮಾರಿ ಧೋರಣೆಯಿಂದ ಕರ್ನಾಟಕದ ಪ್ರಗತಿಪರ ಚಳುವಳಿಗಾರರಿಗೆ ಹಿನ್ನಡೆಯಾಗಬಹುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೂಡಲೇ ಮದ್ಯಸ್ಥಿಕೆ ವಹಿಸಿ ಇಬ್ಬರನ್ನು ರಾಜಿ ಮಾಡಿಸಬೇಕು. ಫ್ಯಾಸಿಸ್ಟ್ ಶಕ್ತಿಗಳು ರಾಜ್ಯದಲ್ಲಿ ಹಲವಾರು ಕುತಂತ್ರಗಳು ಮಾಡುತ್ತಿರುವ ಈ ಸಂದರ್ಭದಲ್ಲಿ ದಲಿತ, ಪ್ರಗತಿಪರ, ಮುಸ್ಲಿಂ, ಎಡಪಂತೀಯರು ಮತ್ತು ಎಲ್ಲಾ ಜಾತ್ಯಾತೀತವಾದಿಗಳು ಸಣ್ಣಪುಟ್ಟ ಭಿನ್ನಾಭಿಪ್ರಾಯ ಮತ್ತು ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗೊತ್ತಿ ಜಾತ್ಯಾತೀತ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದ ಕರ್ನಾಟಕ ಕಟ್ಟಲು ಹೋರಾಡ ಬೇಕೆಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.

To Top
error: Content is protected !!
WhatsApp chat Join our WhatsApp group