ಜಿಲ್ಲಾ ಸುದ್ದಿ

ಜೋಕಟ್ಟೆ ಹುಸೈನಬ್ಬ ಹತ್ಯೆ ಪ್ರಕರಣ : ಮಟ್ಟಾರು ರತ್ನಾಕರ ಹೆಗ್ಡೆಯನ್ನು ತನಿಖೆಗೆ ಒಳಪಡಿಸಲು ಎಸ್ ಡಿ ಪಿ ಐ ಆಗ್ರಹ

ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಸಾವಿನ ಪ್ರಕರಣವು ಸಂಶಯಾಸ್ಪದ ಸಾವಲ್ಲ ಕೊಲೆ ಎಂಬುದರ ಬಗ್ಗೆ ಹಲವು ಸಂಶಯಗಳ ಮೇರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಸಾವಾಗಿದ್ದಾರೆ. ಮತ್ತು ಈ ಕೊಲೆ ಪ್ರಕರಣದಲ್ಲಿ ಪೋಲೀಸರು ಶಾಮೀಲಾಗಿದ್ದಾರೆ ಎಂಬುದು ಬೆಳಕಿಗೆ ಬಂದು ಹಿರಿಯಡ್ಕ ಎಸ್ಸೈ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಿದ್ದಾರೆ. ಪ್ರಕರಣದ ನೈಜತೆಯನ್ನು ಜನರ ಮುಂದೆ ನಿಷ್ಪಕ್ಷಪಾತ ತನಿಖೆ ನಡೆಸಿ ಬಹಿರಂಗಪಡಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ಇನ್ನೂ ಈ ಪ್ರಕರಣದ ಹಿಂದಿರುವ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸುತ್ತಿರುವಾಗ ಬಿಜೆಪಿಯ ನಾಯಕರು ಆರೋಪಿಗಳ ಪರವಾಗಿ ವಕಾಲತ್ತು ಹಾಕಿ ತನಿಖೆಯನ್ನು ದಾರಿ ತಪ್ಪಿಸಲು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ಪೊಲೀಸರು ಮತ್ತು ಏಳು ಮಂದಿ ಸಂಘಪರಿವಾರದ ಗೂಂಡಗಳನ್ನು ಸೇರಿ ಹತ್ತು ಮಂದಿಯ ಬಂಧನ ಮಾತ್ರವಾಗಿದ್ದು ಇನ್ನೂ ಪೊಲೀಸರು ಸಹಿತ 20ಕ್ಕಿಂತಲೂ ಹೆಚ್ಚು ಭಜರಂಗ ದಳದ ಕಾರ್ಯಕರ್ತರು ಭಾಗಿಯಾಗಿರುವ ಸಂಶಯಗಳಿವೆ.
ಹಾಗೆಯೇ ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಯವರು ಈ ಪ್ರಕರಣದಲ್ಲಿ ಸಂಚು ರೂಪಿಸಿರುವ ಮತ್ತು ಭಾಗಿಯಾಗಿರುವ ಇನ್ನೂ ಹಲವು ಆರೋಪಿಗಳಿಗೆ ಆಶ್ರಯ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಪೊಲೀಸ್ ಇಲಾಖೆ ಕೂಡಲೇ ಇವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು.ಹಾಗು ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವವರ ಮೇಲೆಯೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಮತ್ತು ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆಯನ್ನು ಮುಂದುವರಿಸಬೇಕೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

To Top
error: Content is protected !!
WhatsApp chat Join our WhatsApp group