ಸಾಮಾಜಿಕ ತಾಣ

ನಾಲ್ಕು ವರ್ಷಗಳ ನಂತರವೂ ಕಾಡುತ್ತಿರುವ ಫೇಸ್ಬುಕ್ ಪೋಸ್ಟ್!! ಕೇರಳದ ಬಿಜೆಪಿ ನಾಯಕನ ಕಷ್ಟ ಕಾಲ!

ವರದಿಗಾರ: ಕೇರಳದ ಬಿಜೆಪಿ ನಾಯಕ ಕೆ.ಸುರೇಂದ್ರನ್ ರಿಗೆ ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬೊಗಳೆ ಬಿಟ್ಟ ತಪ್ಪಿಗೆ ಈಗ ಮತ್ತೆ ಬೆರಳು ಕಚ್ಚುವ ಪರಿಸ್ಥಿತಿ ಎದುರಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಕೇರಳದ ಬಿಜೆಪಿ ನಾಯಕ ತನ್ನ ಫೇಸ್ಬುಕ್ ಪೇಜಿನಲ್ಲಿ ಸ್ವಿಸ್ ಸರಕಾರವು ಕಪ್ಪು ಹಣ ಹೊಂದಿರುವ ಭಾರತೀಯರ ವಿವರಗಳನ್ನು ನೀಡುವುದಾಗಿ ತಿಳಿಸಿದ್ದರು.

“ಬ್ರೇಕಿಂಗ್ ನ್ಯೂಸ್:
ಸ್ವಿಸ್ ಸರಕಾರವು ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್’ಗಳಲ್ಲಿ ಜಮೆ ಮಾಡಿದ ಭಾರತೀಯರ ವಿವರಗಳನ್ನು ನೀಡಲಿದೆ.

ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಥ್ಯಾಂಕ್ಸ್ ಟು ಮೋದಿ ಗವರ್ನಮೆಂಟ್” ಎಂದು ಕೆ. ಸುರೇಂದ್ರನ್ ತನ್ನ ಫೇಸ್ಬುಕ್ ಪೇಜಿನಲ್ಲಿ ಗೀಚಿದ್ದರು.

ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುವುದಾಗಿ ಭರವಸೆ ನೀಡಿದ್ದ ಬಿಜೆಪಿ ಆಡಳಿತಕ್ಕೆ ಬಂದ ನಂತರ ಅದ್ಯಾವ ರೀತಿಯಲ್ಲಿ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ನಮ್ಮ ಓದುಗರಿಗೆ ತಿಳಿಸುವ ಅವಶ್ಯಕತೆಯಿಲ್ಲ.

ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಜನರು ಈ ಬಿಜೆಪಿ ನಾಯಕನಿಗೆ ತನ್ನ ಸುಳ್ಳನ್ನು ಮತ್ತೆ ನೆನಪಿಸುತ್ತಿದ್ದಾರೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಕಮೆಂಟ್ ಸೆಕ್ಷನ್ ನೋಡಿದರೆ ಈ ಬಿಜೆಪಿ ನಾಯಕನ ದಯನೀಯ ಪರಿಸ್ಥಿತಿ ಕಂಡು ನೀವು ಮರುಕಪಡಬಹುದು.

 

To Top
error: Content is protected !!
WhatsApp chat Join our WhatsApp group