ಸುತ್ತ-ಮುತ್ತ

ಹುಸೇನಬ್ಬ ಕೊಲೆಯಲ್ಲಿ ಪೊಲೀಸ್ ಶಾಮಿಲಾತಿ; ಇಲಾಖೆಯಲ್ಲಿರುವವರು 60% ಸಂಘಪರಿವಾರಿಗಳು ಎಂಬುವುದಕ್ಕೆ ಹಿಡಿದಿರುವ  ಕೈಗನ್ನಡಿ: ಪಾಪ್ಯುಲರ್ ಫ್ರಂಟ್

ವರದಿಗಾರ (ಜೂ.5): ಉಡುಪಿಯ ಪೆರ್ಡೂರು ಗ್ರಾಮದ ಸೀನಬೆಟ್ಟು ಬಳಿ ಮೇ 30ರಂದು ನಡೆದ ದನದ ವ್ಯಾಪಾರಿ ಜೊಕಟ್ಟೆ ಹುಸೇನಬ್ಬರ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಣಣ್ ನಿಂಬರಗಿ ನೇತತ್ವದ ಪೋಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರು ಹಾಗು ಹಿರಿಯಡ್ಕ ಪೋಲೀಸ್ ಠಾಣಾ ಎಸ್ಸೆ ಡಿ.ಎನ್.ಕುಮಾರ್ ಸೇರಿದಂತೆ ಇತರ ಇಬ್ಬರು ಪೊಲೀಸರನ್ನು ಬಂಧಿಸಿರುತ್ತಾರೆ.

ದಕ್ಷಿಣ ಕನ್ನಡ, ಉಡುಪಿ ಪೊಲೀಸ್ ಇಲಾಖೆಯಲ್ಲಿ ಪೋಲಿಸರು ಸಂಘಪರಿವಾರಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪಾಪ್ಯುಲರ್ ಫ್ರಂಟ್ ಹಿಂದಿನಿಂದಲೂ ಬಲವಾಗಿ ಆರೋಪಿಸುತ್ತಾ ಬಂದಿದ್ದು, ಈಗ ಅದು ಸ್ಪಷ್ಟವಾಗಿದೆ. ಅದಲ್ಲದೇ ಈ ಹಿಂದೆ ಗಣೇಶ್ ಕಾರ್ಣಿಕ್ ಎಂಬ ಬಿಜೆಪಿಯ ವಿಧಾನ ಪರಿಷತ್‍ ಸದಸ್ಯ ಕೂಡ ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಸಂಘಪರಿವಾರಿಗಳಿದ್ದಾರೆ ಎಂಬ ಹೇಳಿಕೆಯನ್ನು ಕೊಟ್ಟಿದ್ದರು ಎಂಬುದು ಗಮನಾರ್ಹ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಾವಳಿಯಲ್ಲಿ ಸಂಘಪರಿವಾರವನ್ನು ಪೋಷಿಸಿದ ಕುಖ್ಯಾತಿ ಇಲ್ಲಿನ ಕೆಲ ಪೋಲೀಸರಿಗೆ ಸಲ್ಲುತ್ತದೆ. ಜಿಲ್ಲೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಉದ್ಭವವಾಗಿದ್ದು, ಇಂತಹ ಬೆಳೆವಣಿಗೆ ಮುಂದುವರಿದರೆ ಜನಸಾಮಾನ್ಯರು ಪೊಲೀಸ್ ಇಲಾಖೆಯ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

ಆದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪೋಲೀಸ್ ಇಲಾಖೆಯನ್ನು ಮರುಪರಿಶೀಲಿಸಿ ಕೋಮುವಾದಿ ಪೆÇಲೀಸ್ ಅಧಿಕಾರಿಗಳನ್ನು ಹಾಗೂ ಕಾನ್ಸ್‌ಟೇಬಲ್ ಗಳನ್ನು ಎತ್ತಂಗಡಿ ಮಾಡಬೇಕು ಮತ್ತು ಈ ಪ್ರಕರಣವನ್ನು ಇನ್ನಷ್ಟು ಸಮರ್ಪಕವಾಗಿ ತನಿಖೆ ನಡೆಸಿ ಇದರ ಹಿಂದಿರುವ ಸಂಘಪರಿವಾರದ ನಾಯಕರನ್ನು ಬಂಧಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಆಗ್ರಹಿಸಿದ್ದಾರೆ.

ಇದೇ ವೇಳೆ ಹಲವು ಒತ್ತಡಗಳ ನಡುವೆಯೂ ಲಕ್ಷ್ಣಣ್ ನಿಂಬರಗಿಯವರು ನಡೆಸಿದ ನಿಷ್ಪಕ್ಷಪಾತ ಹಾಗೂ ಮಿಂಚಿನ ತನಿಖೆಯನ್ನು ಪಾಪ್ಯುಲರ್ ಫ್ರಂಟ್ ಮುಕ್ತ ಕಂಠದಿಂದ ಶ್ಲಾಘಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಎ.ಕೆ. ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group