ರಾಷ್ಟ್ರೀಯ ಸುದ್ದಿ

ಪಾಪ್ಯುಲರ್ ಫ್ರಂಟ್ ವಿರುದ್ಧ ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳು: ಸುದ್ದಿಗಳನ್ನು ತೆಗೆದು ಹಾಕುವಂತೆ ಖಡಕ್ ಎಚ್ಚರಿಕೆ ನೀಡಿದ ಎನ್ ಬಿಎಸ್ಎ

ವರದಿಗಾರ (ಜೂ.4): ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವಿರುದ್ಧ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದ ಮಾಧ್ಯಮಗಳಿಗೆ (ಎನ್ ಬಿಎಸ್ಎ) ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಸ್ ಅಥಾರಿಟಿ ಖಡಕ್ ಎಚ್ಚರಿಕೆಯನ್ನು ನೀಡಿದೆ.

ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಇಂಡಿಯಾ ಟುಡೇ ಸುದ್ದಿವಾಹಿನಿಗಳಿಗೆ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಸ್ ಅಥಾರಿಟಿ ಸುಳ್ಳು ಸುದ್ದಿಯನ್ನು ಹರಡದಂತೆ ಸೂಚನೆಯನ್ನು ನೀಡಿದ್ದು, ಈ ಮೊದಲು ಪ್ರಸಾರ ಮಾಡಿದ್ದ ಸುದ್ದಿಗಳನ್ನು ಸೈಟ್ ಗಳಿಂದ ಮತ್ತು ಯೂಟ್ಯೂಬ್ ನಿಂದ ತೆಗೆದು ಹಾಕುವಂತೆ ಖಡಕ್ ಎಚ್ಚರಿಕೆಯನ್ನು ನೀಡಿದೆ.

ಈ ಮೊದಲು ಪಾಫ್ಯುಲರ್ ಫ್ರಂಟ್ ಸಂಘಟನೆಯು  ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಇಂಡಿಯಾ ಟುಡೇ ಸುದ್ದಿವಾಹಿನಿಗಳು ಸಂಘಟನೆಯ ಮೇಲೆ ನಿರಾಧಾರ ಆರೋಪವನ್ನು ಹೊರಿಸಿ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದು, ಕಾನೂನಿಗೆ ಬದ್ಧವಾಗಿರುವ ಸಂಘಟನೆಯ ಹೆಸರನ್ನು ಹಾಳು ಮಾಡುತ್ತಿದೆ ಎಂದು ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಸ್ ಅಥಾರಿಟಿಗೆ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ಜಿನ್ನಾ ದೂರನ್ನು ಸಲ್ಲಿಸಿದ್ದರು

ದೂರು ಸ್ವೀಕರಿಸಿದ ಎನ್ ಬಿಎಸ್ಎ , ಇದುವರೆಗೆ ಪಾಫ್ಯುಲರ್ ಫ್ರಂಟ್ ವಿರುದ್ಧ ಚಾರ್ಜ್ ಶೀಟನ್ನು ಸಲ್ಲಿಕೆ ಮಾಡಲಾಗಿದೆ ಹೊರತು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ಸುದ್ದಿಗಳ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಹೇಳಿದೆ. ಸರಕಾರ ಪಾಫ್ಯುಲರ್ ಫ್ರಂಟ್ ಯನ್ನು ನಿಷೇಧಿಸಿಲ್ಲ ಮತ್ತು ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಸಾಬೀತಾಗದಿದ್ದರೂ ಮತ್ತೇಕೆ ಸುದ್ದಿವಾಹಿನಿಗಳು ತೇಜೋವಧೆಯನ್ನು ಮಾಡುತ್ತಿದೆ ಎಂದು ಮಾಧ್ಯಮಗಳಿಗೆ  ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಸ್ ಅಥಾರಿಟಿ ಖಾರವಾಗಿ ಪ್ರಶ್ನಿಸಿದೆ. ಈ ಮೂಲಕ ಸುಳ್ಳು ಸುದ್ದಿಯನ್ನು ಪ್ರಕಟಿಸಿರುವ ಮಾಧ್ಯಮಗಳಿಗೆ ಭಾರೀ ಮುಖಭಂಗವಾಗಿದೆ.

ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಸ್ ಅಥಾರಿಟಿಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಸುಳ್ಳು ಸುದ್ದಿ ಹರಡಿರುವ ಮಾಧ್ಯಮಗಳಿಗೆ ನೀಡಿರುವ ಸೂಚನೆ:

India Today

Republic TV

Times Now

ಇದನ್ನೂ ಓದಿ:

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇತ್ತೀಚೆಗೆ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಸ್ ಅಥಾರಿಟಿಗೆ ಸಲ್ಲಿಸಿದ್ದ ದೂರು

Defamatory reports: PFI files complaint against 3 TV channels

 

To Top
error: Content is protected !!
WhatsApp chat Join our WhatsApp group