ರಾಷ್ಟ್ರೀಯ ಸುದ್ದಿ

ಹರಿಯಾಣ: ದುಷ್ಕರ್ಮಿಗಳಿಂದ ನಮಾಝ್ ನಿರ್ವಹಿಸುತ್ತಿದ್ದವರ ಮೇಲೆ ಹಲ್ಲೆ, ಮಸೀದಿಗೆ ಹಾನಿ

ವರದಿಗಾರ(04-06-2018): ಹರಿಯಾಣದ ಕರ್ನಾಲ್ ಜಿಲ್ಲೆಯ ನೇವಲ್ ಎಂಬಲ್ಲಿ ದುಷ್ಕರ್ಮಿಗಳು ಮಸೀದಿ ಹಾನಿಗೊಳಿಸಿ, ಪ್ರಾರ್ಥನೆಗೆ ಅಡ್ಡಿಪಡಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಮಸೀದಿ ಗೋಡೆಯನ್ನು ಹಾನಿಗೊಳಿಸಿದ ದುಷ್ಕರ್ಮಿಗಳು, ಮಸೀದಿಯೊಳಗೆ ನಮಾಝ್ ನಿರ್ವಹಿಸುತ್ತಿದ್ದವರ ಮೇಲೆಯೂ ಹಲ್ಲೆ ನಡೆಸಿದರು. ಆಝಾನಿಗೆ ಬಳಸುತ್ತಿದ್ದ ಸ್ಪೀಕರನ್ನೂ ನಾಶಪಡಿಸಲಾಗಿದೆ.

ಮಸೀದಿಯಲ್ಲಿರುವವರಿಗೆ ಜೀವ ಬೆದರಿಕೆಯನ್ನೂ ನೀಡಲಾಗಿದೆ ಎಂದು ಮಸೀದಿಯಲ್ಲಿದ್ದವರು ದೂರಿದ್ದಾರೆ.

ಸ್ಥಳೀಯರ ಪ್ರಕಾರ, ಮಸೀದಿಯಿಂದ ಕೇಳಿ ಬರುತ್ತಿದ್ದ ಅಝಾನ್ ಶಬ್ದವನ್ನು ಸಹಿಸಲಾಗದ ಅಸಹಿಷ್ಣುತ ಕಿಡಿಗೇಡಿಗಳ ಗುಂಪೊಂದು ಮಸೀದಿ ಮೇಲೆ ದಾಳಿ ನಡೆಸಿ, ಗೋಡೆಯನ್ನು ಹಾನಿಗೊಳಿಸಿದರು ಹಾಗೂ ಪ್ರಾರ್ಥನಾ ನಿರತರ ಮೇಲೆ ಹಲ್ಲೆ ನಡೆಸಿದರು.

ದುಷ್ಕರ್ಮಿಗಳ ಕೃತ್ಯದಿಂದ ಮಧ್ಯದಿಂದಲೇ ನಮಾಝ್ ತ್ಯಜಿಸಬೇಕಾದ ಪ್ರಾರ್ಥನಾ ನಿರತ ಮುಸ್ಲಿಮರು ಕುಂಜ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

To Top
error: Content is protected !!
WhatsApp chat Join our WhatsApp group