ರಾಜ್ಯ ಸುದ್ದಿ

ಸರಕಾರಿ ಅನಗತ್ಯ ಖರ್ಚು ವೆಚ್ಚಕ್ಕೆ ತಡೆ ಹಾಕಿದ ಮುಖ್ಯಮಂತ್ರಿ

ವರದಿಗಾರ (ಜೂ.3): ಸರಕಾರದ ಅನಗತ್ಯ ಖರ್ಚು ವೆಚ್ಚಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ  ಕಡಿವಾಣ ಹಾಕಲು ಮುಂದಾಗಿದ್ದು, ಅನಗತ್ಯವಾದ ಎಲ್ಲ ಖರ್ಚುಗಳನ್ನು ತಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೊಕ್ಕಸದ ಹೊರೆ ತಪ್ಪಿಸಲು ನೂತನ ಸಚಿವರಿಗೆ, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಹೊಸ ಕಾರು ಖರೀದಿ ಬೇಡ ಎಂದು ಸೂಚನೆ ನೀಡಿರುವ ಮುಖ್ಯಮಂತ್ರಿಗಳು, ಸಚಿವರ ಕೊಠಡಿ ನವೀಕರಣ ಕಾರ್ಯಕ್ಕೂ ಅವಕಾಶ ಬೇಡ ಎಂದು ಹೇಳಿಕೆ ನೀಡಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಮಾತ್ರ ವಿಶೇಷ ವಿಮಾನ ಬಳಕೆಗೆ ತೀರ್ಮಾನಿಸಿರುವ ಅವರು, ತಾವು ಸೇರಿದಂತೆ ಸರಕಾರದ ಸಚಿವರು, ಹಿರಿಯ ಅಧಿಕಾರಿಗಳ ವಿಶೇಷ ವಿಮಾನ ಬಳಕೆಗೂ ಮಿತಿ ಹೇರಿದ್ದಾರೆ.

ತಮ್ಮ ಬೆಂಗಾವಲು ಭದ್ರತಾ ಸಿಬ್ಬಂದಿಯನ್ನು ಕಡಿತಗೊಳಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ, ಅನಗತ್ಯ ಸರಕಾರಿ ವಾಹನಗಳ ಬಳಕೆಗೂ ನಿರ್ಬಂಧ ಹೇರಿದ್ದಾರೆ.

ಸರಕಾರದ ಮಟ್ಟದಲ್ಲಿ ಅನಗತ್ಯವಾಗಿ ಕೆಲಸಗಳಿಗೆ ಹಣ ಪೋಲಾಗುವುದರ ಮಾಹಿತಿ ಪಡೆದು ಆರ್ಥಿಕ ಶಿಸ್ತು ಮೂಡಿಸಲು ತಮ್ಮದೇ ಆದ ಈ ಸೂಚನೆಗಳನ್ನು ಅವರು ಜಾರಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಲಾಯದ ಮೂಲಗಳು ಹೇಳಿವೆ.

 

To Top
error: Content is protected !!
WhatsApp chat Join our WhatsApp group