ರಾಜ್ಯ ಸುದ್ದಿ

‘ಯಾವುದೋ ಉದ್ದೇಶ ಸಾಧಿಸಲು ಪುಟಗೋಸಿ ಜೆಡಿಎಸ್  ಪಕ್ಷಕ್ಕೆ ಸಲಾಂ ಹೊಡೆದ ಕಾಂಗ್ರೆಸ್’: ಅನಂತ್ ಕುಮಾರ್ ಹೆಗಡೆ

ಜೆಡಿಎಸ್ ನ್ನು ಹಿಯಾಲಿಸಿ ಲೇವಡಿ ಮಾಡಿದ ಅನಂತ್ ಕುಮಾರ್ ಹೆಗಡೆ

ವರದಿಗಾರ (ಜೂ.3) ‘ದೇಶದಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ  ಎನಿಸಿಕೊಂಡ ಕಾಂಗ್ರೆಸ್, ಯಾವುದೋ ಉದ್ದೇಶ ಸಾಧಿಸಲು ಕರ್ನಾಟಕ ದಲ್ಲಿ ‘ಪುಟಗೋಸಿ ಜೆಡಿಎಸ್  ಪಕ್ಷ’ಕ್ಕೆ ಸಲಾಂ ಹೊಡೆಯುವಂತಹ ದಯನೀಯ ಸ್ಥಿತಿಯನ್ನು ತಂದುಕೊಂಡಿತು’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹಿಯಾಲಿಸಿ ಮಾತುಗಳನ್ನಾಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಹೆಗಡೆ, ‘ಇನ್ನು ಮುಂದೆ ದೇಶದಲ್ಲಿ ಬಿಜೆಪಿ ಬೆಳವಣಿಗೆಯು ಕಾಂಗ್ರೆಸ್‌ಗೆ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವೇ ಹೊರಟು ಹೋಗಲಿದೆ’ ಎಂದು ಹೇಳಿಕೆ ನೀಡಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

‘ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವವರೆಗೂ ರಾಜಕೀಯ ಬಿಡಲಾರೆ ಎಂದು ತನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಈ ಸಲದ ಚುನಾವಣೆಯಲ್ಲಿ ಜನರಿಗೆ ಪಕ್ಷದ ಬಗ್ಗೆ ಪ್ರೀತಿ ಇತ್ತು. ಆದರೆ, ಸರಿಯಾಗಿ ಅವರನ್ನು ತಲುಪಲಾಗಲಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಮುಂದಿನ ಚುನಾಣೆಯಲ್ಲಿ ಎಲ್ಲ ಆರೂ ಸ್ಥಾನಗಳು ಬಿಜೆಪಿ ತೆಕ್ಕೆಗೆ ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆದರೆ ಇತರ ಪಕ್ಷಗಳನ್ನು ಹಿಯಾಲಿಸುವ ಮತ್ತು ಕೀಳು ಮಟ್ಟದಲ್ಲಿ ಚಿತ್ರೀಕರಿಸುವ ಅನಂತ್ ಕುಮಾರ್ ಹೆಗಡೆ ಒಂದಂತೂ ನೆನಪಿಲ್ಲಿಟ್ಟುಕೊಳ್ಳಬೇಕು. ಬಿಜೆಪಿ ಇಂದು ಅಧಿಕಾರಕ್ಕೆ ಬಂದಿರುವುದು ಒಂದು ದಿನ ಪುಟಗೋಸಿಯಾಗಿದ್ದುಕೊಂಡೇ ಎಂಬುವುದನ್ನು. ನಾಳೆ ಅದು ಬಿಜೆಪಿ ಪಾಲಿಗೆ ಮತ್ತೊಮ್ಮೆ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಎಲ್ಲವೂ ನಡೆಯುತ್ತೆ. ‘ರಾಜಕೀಯದಲ್ಲಿ ನಿಮ್ಮಂತವರ ನಿರ್ಧರಿಸುವುದು ಈ ದೇಶದ ಜನತೆ’ ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ತುರ್ತು ಅವಶ್ಯಕತೆ ನಿಮ್ಮ ಮುಂದಿದೆ.

 

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group