ರಾಜ್ಯ ಸುದ್ದಿ

ವಿವಿ ಪ್ಯಾಟ್‌ ರಶೀದಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಚುನಾವಣಾ ಅಧಿಕಾರಿಯ ಬಂಧನ

ವರದಿಗಾರ (ಜೂ. 2): ವಿಜಯಪುರ ಜಿಲ್ಲೆಯ ಉಕ್ಕಲಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ‘ವಿವಿ ಪ್ಯಾಟ್’ ನ ರಶೀದಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ದೊರೆತಿದ್ದು, ಮತಗಟ್ಟೆ ಚುನಾವಣೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಮನಗೂಳಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತ ಅಧಿಕಾರಿಯನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಸವನ ಬಾಗೇವಾಡಿ ಮತಕ್ಷೇತ್ರದ ಉಕ್ಕಲಿ ಗ್ರಾಮದಲ್ಲಿ ಮೇ 27ರಂದು ವಿವಿ ಪ್ಯಾಟ್ ರಶೀದಿ ಪತ್ತೆಯಾಗಿತ್ತು.

To Top
error: Content is protected !!
WhatsApp chat Join our WhatsApp group