ರಾಷ್ಟ್ರೀಯ ಸುದ್ದಿ

27 ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 5

ದೇಶದಲ್ಲೆಡೆ ಮೋದಿ, ಬಿಜೆಪಿ ವಿರೋಧಿ ಅಲೆ

ಪರ್ಯಾಯ ರಾಜಕೀಯದತ್ತ ಒಲವು ತೋರಿಸುತ್ತಿರುವ ಜನತೆ

ವರದಿಗಾರ( ಜೂ.1): 2014ರಿಂದ 2018ರವರೆಗೆ ನಡೆದ 27 ಲೋಕಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು ಕೇವಲ 5 ಸೀಟು ಮಾತ್ರವಾಗಿದ್ದು, ದೇಶದೆಲ್ಲೆಡೆ ಬಿಜೆಪಿ, ಮೋದಿ ವಿರೋಧಿ ಅಲೆ ಇರಿವುದು ಮತ್ತು ಜನತೆ ಪರ್ಯಾಯ ರಾಜಕೀಯವನ್ನು ಸ್ವೀಕರಿಸುತ್ತಿದ್ದಾರೆ ಎಂಬುವುದಕ್ಕೆ ಚುನಾವಣಾ ಫಲಿತಾಂಶಗಳು ಹೇಳುತ್ತಿದೆ.

ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೂಡಾ ಗೆಲುವು ಸಾಧಿಸಿದ್ದು ಐದೇ ಸೀಟುಗಳಲ್ಲಿ. ಆದರೆ ತೃಣಮೂಲ ಕಾಂಗ್ರೆಸ್  ನಾಲ್ಕು ಮತ್ತು ಸಮಾಜವಾದಿ ಪಾರ್ಟಿ 3, ತೆಲಂಗಾಣ  ರಾಷ್ಟ್ರಸಮಿತಿ(ಟಿಆರ್‍ಎಸ್) 2, ಎನ್‍ಸಿಪಿ, ನ್ಯಾಷನಲ್ ಕಾನ್ಫರೆನ್ಸ್, ಮುಸ್ಲಿಂ ಲೀಗ್, ಆರ್‍‍ಜೆಡಿ, ಎನ್‍ಡಿಪಿಪಿ, ಆರ್‍ಎಲ್‍ಡಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ತಲಾ ಒಂದು ಸೀಟುಗಳನ್ನು ಗೆದ್ದು ಕೊಂಡಿದೆ.

ಉಪ ಚುನಾವಣೆ ನಡೆದ 27 ಸೀಟುಗಳಲ್ಲಿ  11 ಸೀಟುಗಳು ಬಿಜೆಪಿ ಅಧಿಪತ್ಯವಿದ್ದ ಸೀಟುಗಳಾಗಿದ್ದವು. ಇದರಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. 2015ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಧ್ಯಪ್ರದೇಶದ ರಾತಲಾಂ ಕ್ಷೇತ್ರ ಬಿಜೆಪಿ ಕೈ ಜಾರಿತು. ಆದರೆ  2016ರಲ್ಲಿ ಅಸ್ಸಾಂಲ್ಲಿ ಲಕ್ಷ್ಮಿಂಪುರ್, ಮಧ್ಯಪ್ರದೇಶದ ಸಹ್‍ಡಾಲ್ ಕ್ಷೇತ್ರದಲ್ಲಿ ಬಿಜೆಪಿ  ಗೆಲುವು ಸಾಧಿಸಿತು. ಮೇಘಾಲಯದಲ್ಲಿ ಮಿತ್ರಪಕ್ಷವಾದ  ಎನ್‍ಸಿಪಿ ಕೂಡಾ ಗೆದ್ದಿತ್ತು.
2017ರ ಚುನಾವಣೆ ಗಮನಿಸಿದರೆ ಅದು ಬಿಜೆಪಿ ಪಾಲಿಗೆ ನಷ್ಟದ ವರ್ಷವಾಗಿತ್ತು. ಪಂಜಾಬ್‍ನ ಗುರುದಾಸ್ ಪುರ್ ಮತ್ತು ಶ್ರೀನಗರ  ಬಿಜೆಪಿ ಮಿತ್ರ ಪಕ್ಷವಾದ ಪಿಡಿಪಿಯ ಕೈ ಜಾರಿತು.

ನರೇಂದ್ರ ಮೋದಿಯವರು ಪ್ರಧಾನಿ ಪಟ್ಟಕ್ಕೇರಿದನಂತರ ನಡೆದ ಉಪ ಚುನಾವಣೆಗಳ ಫಲಿತಾಂಶದ ಪಟ್ಟಿ ಈ ರೀತಿ ಇದೆ.

2014
ಬೀಡ್, ಮಹಾರಾಷ್ಟ್ರ  – ಬಿಜೆಪಿ
ಕಂದಾಮಾಲ್, ಒಡಿಶಾ- ಬಿಜೆಪಿ
ಮೇಡಕ್, ತೆಲಂಗಾಣ- ಟಿಆರ್‍ಎಸ್
ವಡೋದರಾ , ಗುಜರಾತ್ –   ಬಿಜೆಪಿ
ಮೈನ್‍ಪುರಿ , ಉತ್ತರ ಪ್ರದೇಶ – ಎಸ್‍ಪಿ

2015
ರಾತ್‍ಲಾಂ, ಮಧ್ಯ ಪ್ರದೇಶ – ಬಿಜೆಪಿಯ ಸೀಟು ಆಗಿತ್ತು, ಕಾಂಗ್ರೆಸ್ ಗೆಲುವು
ವಾರಾಂಗಲ್, ತೆಲಂಗಾಣ – ಟಿಆರ್‍ಎಸ್
ಬಾಂಗೋನ್, ಪಶ್ಚಿಮ ಬಂಗಾಳ – ಟಿಎಂಸಿ

2016
ಲಖಿಂಪುರ್, ಅಸ್ಸಾಂ- ಬಿಜೆಪಿ
ಶಹದೋಲ್, ಮಧ್ಯ ಪ್ರದೇಶ – ಬಿಜೆಪಿ
ಕೂತ್‍ಬೆಹರ್, ಪಶ್ಚಿಮ ಬಂಗಾಳ- ಟಿಎಂಸಿ
ತಾಮ್ಲುಕ್ , ಪಶ್ಚಿಮ ಬಂಗಾಳ – ಟಿಎಂಸಿ
ತುರಾ, ಮೇಘಾಲಯ -ಎನ್‍ಪಿಪಿ

2018
ಅಲ್ವಾರ್, ರಾಜಸ್ಥಾನ – ಬಿಜೆಪಿ ಸೀಟು ಆಗಿತ್ತು, ಕಾಂಗ್ರೆಸ್‍ಗೆ ಗೆಲುವು
ಅಜ್ಮೇರ್, ರಾಜಸ್ಥಾನ-  ಬಿಜೆಪಿ ಸೀಟು ಆಗಿತ್ತು, ಕಾಂಗ್ರೆಸ್‍ಗೆ ಗೆಲುವು
ಉಲುಬೇರಿಯಾ, ಪಶ್ಚಿಮ ಬಂಗಾಳ – ಟಿಎಂಸಿ
ಗೋರಖ್‍ಪುರ, ಉತ್ತರ ಪ್ರದೇಶ – ಬಿಜೆಪಿ ಸೀಟು ಆಗಿತ್ತು, ಸಮಾಜವಾದಿ ಪಾರ್ಟಿ ಗೆಲುವು
ಫುಲ್‍ಪುರ್, ಉತ್ತರ ಪ್ರದೇಶ – ಬಿಜೆಪಿ ಸೀಟು ಆಗಿತ್ತು, ಸಮಾಜವಾದಿ ಪಾರ್ಟಿ ಗೆಲುವು
ಅರಾರಿಯಾ, ಬಿಹಾರ್ – ಆರ್‍‍ಜೆಡಿ
ಕೈರಾನಾ, ಉತ್ತರ ಪ್ರದೇಶ-   ಬಿಜೆಪಿ ಸೀಟು ಆಗಿತ್ತು, ಸಮಾಜವಾದಿ, ಆರ್‍ಎಲ್‍ಡಿ ಗೆಲುವು
ಪಾಲ್ಘರ್‌ , ಮಹಾರಾಷ್ಟ್ರ – ಬಿಜೆಪಿ
ಭಂಡಾರಾ-ಗೊಂಡಿಯಾ, ಮಹಾರಾಷ್ಟ್ರ-  ಬಿಜೆಪಿ ಸೀಟು ಆಗಿತ್ತು, ಎನ್‌ಸಿಪಿ ಗೆಲುವು
ನಾಗಾಲ್ಯಾಂಡ್, ನಾಗಾಲ್ಯಾಂಡ್ –  ಎನ್‍ಪಿಎಫ್ ಸೀಟು ಆಗಿತ್ತು, ಎನ್‍ಡಿಪಿಪಿ ಗೆಲುವು

ಈ ಎಲ್ಲಾ ಫಲಿತಾಂಶವನ್ನು ಗಮನಿಸುವಾಗ ದೇಶದಲ್ಲೆಡೆ ಬಿಜೆಪಿ ವಿರೋಧಿ ಅಲೆ ದಟ್ಟವಾಗಿದೆ. ಸ್ವತಃ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದ ಕ್ಷೇತ್ರದಲ್ಲೂ ಬಿಜೆಪಿಯು ಭಾರೀ ಹಿನ್ನಡೆ ಸಾಧಿಸುತ್ತಾ ತೀವ್ರ ರೀತಿಯ ಮುಖಭಂಗಕ್ಕೆ ಒಳಗಾಗಿದೆ. ಇತರ ಪಕ್ಷಗಳು ಈ ಫಲಿತಾಂಶವನ್ನು ಸರಿಯಾಗಿ ಉಪಯೋಗಿಸಿದೇ ಆದಲ್ಲಿ ಬಿಜೆಪಿಯು ಅಧಿಕಾರ ಕಳೆದುಕೊಳ್ಳಲಿದೆ.

To Top
error: Content is protected !!
WhatsApp chat Join our WhatsApp group