ರಾಷ್ಟ್ರೀಯ ಸುದ್ದಿ

ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಕೈರಾನಾದಲ್ಲಿ  ಬಿಜೆಪಿಗೆ ತೀವ್ರ ಹಿನ್ನಡೆ: ಒಪ್ಪಿಕೊಂಡ ಹಿರಿಯ ಬಿಜೆಪಿ ನಾಯಕ

ವರದಿಗಾರ( ಜೂ.1): ನಿನ್ನೆಯಷ್ಟೇ ಫಲಿತಾಂಶ ಹೊರಬಿದ್ದ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿರೋಧ ಪಕ್ಷಗಳು ಪ್ರದರ್ಶಿಸಿದ ಒಗ್ಗಟ್ಟಿನಿಂದಾಗಿ ಬಿಜೆಪಿಯು ಸೋಲು ಅನುಭವಿಸಿದ್ದು, ಇದು ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಚಂದನ್ ಮಿತ್ರಾ ಒಪ್ಪಿಕೊಂಡಿದ್ದಾರೆ.

ಬಿಜೆಪಿಯ ಹುಕುಂ ಸಿಂಗ್ ಈ ಕ್ಷೇತ್ರದಲ್ಲಿ 20114ರ ಚುನಾವಣೆಯಲ್ಲಿ ಶೇಕಡ 50ಕ್ಕಿಂತಲೂ ಅಧಿಕ ಮತ ಪಡೆದು ಗೆದ್ದಿದ್ದರು. ಈ ಬಾರಿ ಶೇಕಡ ನಾಲ್ಕರಷ್ಟು ಮತ ಮಾತ್ರ ಪಕ್ಷದ ಕೈತಪ್ಪಿದ್ದರೂ, ಅವರ ಪುತ್ರಿಯ ಸೋಲಿಗೆ ಅದು ಕಾರಣವಾಗಿದೆ. “ವಿರೋಧ ಪಕ್ಷಗಳು ಸಂಘಟಿತವಾದಲ್ಲಿ, ಬಿಜೆಪಿ 2019ರ ಚುನಾವಣೆಯಲ್ಲಿ ನಿಜವಾಗಿಯೂ ಕಠಿಣ ಹೋರಾಟ ನಡೆಸಬೇಕಾಗುತ್ತದೆ” ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಕಬ್ಬು ಬೆಳೆ ಪ್ರದೇಶ ಅಧಿಕವಾಗಿರುವ ಈ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಈ ಬಾರಿ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ವಿಷಯವನ್ನೇ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿತ್ತು. ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ, ಕಬ್ಬು ಬೆಳೆಗಾರರಿಗೆ ಬರಬೇಕಿರುವ ಬಾಕಿ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ನೀಡಿದ್ದ ಭರವಸೆ ಹುಸಿಯಾದದ್ದು ರೈತರನ್ನು ಕೆರಳಿಸಿದೆ. ರೈತರ ಸಮಸ್ಯೆಗೆ ಬಿಜೆಪಿ ಸಾಕಷ್ಟು ಗಮನಹರಿಸಲಿಲ್ಲ. ರೈತರು ಅಸಮಾಧಾನಹೊಂದಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಲಹೆ ಮಾಡಿದ್ದಾರೆ.

To Top
error: Content is protected !!
WhatsApp chat Join our WhatsApp group