ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ತತ್ತರಿಸಿದ ಜನತೆ: ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಆಗಮನ

ವರದಿಗಾರ (ಮೇ.30): ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ  ಮುಂದುವರಿದಿದ್ದು, ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಇಂದು ಬೆಳಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮಂಗಳೂರಿಗೆ ಆಗಮಿಸಿದ್ದು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು  ರೈಲು, ವಿಮಾನ ಸೇವೆಯಲ್ಲಿಯೂ ವ್ಯತ್ಯಯವುಂಟಾಗಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದ ಕರಾವಳಿ ಪ್ರದೇಶಗಳಿಗೆ ನೈರುತ್ಯ ಮುಂಗಾರು ಬುಧವಾರ ಕಾಲಿಡಲಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯು ಟ್ವೀಟ್ ಮಾಡಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕರ್ನಾಟಕದ ಕರಾವಳಿಗೆ ಮುಂಗಾರು ಆಗಮಿಸಲಿದ್ದು ಭಾರಿ ಮಳೆ ಮುಂದುವರಿಯಲಿದೆ ಎಂದು ಹೇಳಿದೆ. ಆದ್ದರಿಂದ ಜನತೆ ಎಚ್ಚರಿಕೆಯಿಂದ ಇರಬೇಕಾಗಿದೆ.

ಸಹಾಯವಾಣಿ:
ಮಂಗಳೂರಿನಲ್ಲಿ ನೆರೆ ಸಂತ್ರಸ್ತರು ನಿಯಂತ್ರಣಾ ಕೊಠಡಿ 1077 ಸಂಖ್ಯೆಗೆ ಕರೆ ಮಾಡಿ ಸಹಾಯ ಕೋರಬಹುದು.
ಜಿಲ್ಲಾಡಳಿತದ ಸಹಾಯವಾಣಿ :  9448549445 ಮತ್ತು 9448104455.

ವೀಡಿಯೋ ವೀಕ್ಷಿಸಿ:

ಇದನ್ನೂ ಓದಿ:

To Top
error: Content is protected !!
WhatsApp chat Join our WhatsApp group