ರಾಷ್ಟ್ರೀಯ ಸುದ್ದಿ

‘ಭರವಸೆ ಈಡೇರಿಸದ ಪ್ರಚಾರಪ್ರಿಯ ಪ್ರಧಾನಿ ಮೋದಿ’ : ಚಂದ್ರಬಾಬು ನಾಯ್ಡು

ವರದಿಗಾರ (ಮೇ.28): ಭರವಸೆ ಈಡೇರಿಸದ ಪ್ರಚಾರಪ್ರಿಯ ಪ್ರಧಾನಿ ಮೋದಿ ಎಂದು ಟಿಡಿಪಿಯ ವಾರ್ಷಿಕ ಸಮಾವೇಶ ‘ಮಹಾನಾಡು’ ಉದ್ಘಾಟಿಸಿ ಮೋದಿಯನ್ನು ಟೀಕಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ‘‘2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿ ಅಧಿಕಾರಕ್ಕೆ ಬರಲಾರದು’ ಎಂದು ಹೇಳಿದ್ದಾರೆ.

ಈ ಹಿಂದೆ ಸರಕಾರ ರೂಪಿಸುವಲ್ಲಿ ಟಿಡಿಪಿ ಪ್ರಧಾನ ಪಾತ್ರ ವಹಿಸಿದೆ ಹಾಗೂ ದೇಶದ ರಾಜಕೀಯ ಬದಲಾಯಿಸುವ ಶಕ್ತಿ ಟಿಡಿಪಿಗೆ ಇದೆ ಎಂದು ಅವರು ಹೇಳಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ದೂರದ ಕನಸು. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡುವ ಪ್ರಚಾರ ಪ್ರಿಯ ಪ್ರಧಾನಿ. ಅವರು ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಇದರೊಂದಿಗೆ 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸೂಚನೆಯನ್ನು ಅವರು ನೀಡಿದ್ದಾರೆ.

 

To Top
error: Content is protected !!
WhatsApp chat Join our WhatsApp group