ರಾಜ್ಯ ಸುದ್ದಿ

2019ರಲ್ಲಿ ಮೋದಿ ಮನೆಗೆ: ಭವಿಷ್ಯ ನುಡಿದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ

ವರದಿಗಾರ ( ಮೇ. 28): 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಕೊಡಬೇಕೆಂದು  ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ

ಅವರು   ಬೆಂಗಳೂರಿನ ಶಾಸಕರ ಭವನ ಸಭಾಂಗಣದಲ್ಲಿ ಪ್ರಗತಿಪರರ ವೇದಿಕೆ ಹಮ್ಮಿಕೊಂಡಿದ್ದ, ‘ಪ್ರಜಾಪ್ರಭುತ್ವ-ಸಂವಿಧಾನ ಅಪಾಯ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.

2019ರ ಲೋಕಸಭಾ ಚುನಾವಣೆ ಎದುರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ದೇಶದೆಲ್ಲೆಡೆ ಜ್ಯಾತ್ಯತೀತ ಪಕ್ಷಗಳು, ಸಮಾನ ಮನಸ್ಕರು ಒಂದಾಗುತ್ತಿದ್ದು, ಸೂಕ್ತ ಸಲಹೆ, ಮಾರ್ಗದರ್ಶನದ ಮೂಲಕ 2019ರ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ, ಈಗಲೇ ನಾವು  ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾನ ಮನಸ್ಕರು ಹೋರಾಟ, ಜಾಗೃತಿ ಮೂಡಿಸಿದ ಕಾರಣದಿಂದಾಗಿ ಇಲ್ಲಿ ಜ್ಯಾತ್ಯತೀತ ತತ್ವ ಆಧಾರದ ಮೇಲೆ ಸಮ್ಮಿಶ್ರ ಸರಕಾರ ಬಂದಿದೆ.

To Top
error: Content is protected !!
WhatsApp chat Join our WhatsApp group