ಸಾಮಾಜಿಕ ತಾಣ

ರಶೀದ್ ಖಾನ್ ವಿಶ್ವದ ಬೆಸ್ಟ್ ಸ್ಪಿನ್ನರ್: ಸಚಿನ್ ತೆಂಡೂಲ್ಕರ್ ಪ್ರಶಂಸೆ

ವರದಿಗಾರ (ಮೇ.26): ಅಫ್ಘಾನಿಸ್ತಾನದ ಯುವ ಬೌಲರ್ 19 ವರ್ಷದ ರಶೀದ್ ಖಾನ್ ವಿಶ್ವದ ಬೆಸ್ಟ್ ಸ್ಪಿನ್ನರ್ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಬಣ್ಣಿಸಿದ್ದಾರೆ.

ಕಳೆದ ರಾತ್ರಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ನಿಸ್ಸಂದೇಹವಾಗಿಯೂ ರಶೀದ್ ಖಾನ್, ಟಿ-೨೦ ಆವೃತ್ತಿಯಲ್ಲಿ ವಿಶ್ವದ ಬೆಸ್ಟ್ ಸ್ಪಿನ್ನರ್ ಎಂದು ಹೇಳಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ರಶೀದ್ ಖಾನ್ ಕೇವಲ 19 ರನ್ ನೀಡಿ 3 ವಿಕೆಟ್ ಗಳಿಸಿದ್ದರಲ್ಲದೆ ಕೇವಲ 10 ಬಾಲ್ ಗಳಲ್ಲಿ 34 ರನ್ ಬಾರಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಶೀದ್ ಖಾನ್ ರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಮುಕ್ತ ಕಂಠದಿಂದ ಸಚಿನ್ ತೆಂಡೂಲ್ಕರ್ ಪ್ರಶಂಸಿಸಿದ್ದಾರೆ.

To Top
error: Content is protected !!
WhatsApp chat Join our WhatsApp group