ರಾಜ್ಯ ಸುದ್ದಿ

ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದ ಕೇಂದ್ರ ಸಚಿವ

ವರದಿಗಾರ (ಮೇ.02): ಬಿಜೆಪಿಯ ಮಾಜಿ ಸಚಿವ ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವೇ ಇಲ್ಲ ಮತ್ತು ಬಿ.ಶ್ರೀರಾಮಲು -ಜನಾರ್ದನ ರೆಡ್ಡಿ ಸಹೋದರರಲ್ಲ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದು, ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂರ್ನಾಲ್ಕು ಬಾರಿ ಪುನರುಚ್ಛರಿಸುವ ಮೂಲಕ ಅವರೊಳಗಿದ್ದ ಸಂಶಯದಿಂದ ಪೇಚಿಗೆ ಸಿಲುಕಿದ ಘಟನೆ ನಡೆಯಿತು.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ಬಗ್ಗೆ ವದಂತಿ ಹಬ್ಬಿಸುತ್ತಿರುವ ಕಾರಣಕ್ಕೆ ಪದೇ ಪದೇ ಹೇಳಬೇಕಿದೆ ಎಂದು ಸಮರ್ಥನೆ ನೀಡುವ ಮೂಲಕ ‘ಬಿಎಸ್‌ವೈ ಸಿಎಂ ಆಗುವ ಬಗ್ಗೆ ನಿಮಗೂ ಸಂಶಯವೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು.

ಯಡಿಯೂರಪ್ಪ ನಾಯಕತ್ವದಲ್ಲಿ ನಮಗೆ ಮತ್ತು ಜನತೆಗೆ ನಂಬಿಕೆ ಇದೆ. ಆದರೆ, ಕಾಂಗ್ರೆಸ್ ವದಂತಿ ಹಬ್ಬಿಸುತ್ತಿರುವ ಕಾರಣ ನಾವು ಪದೇ ಪದೇ ಹೇಳಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

To Top
error: Content is protected !!
WhatsApp chat Join our WhatsApp group