ರಾಷ್ಟ್ರೀಯ ಸುದ್ದಿ

ಕಥುವಾ ಅತ್ಯಾಚಾರಿಗಳನ್ನು ಬೆಂಬಲಿಸಿದ್ದ ಬಿಜೆಪಿ ಶಾಸಕನಿಗೆ ಕ್ಯಾಬಿನೆಟ್ ಮಂತ್ರಿ ಪಟ್ಟದ ‘ಕಿರೀಟ’ !

ವರದಿಗಾರ (ಎ 30) : ಇಡೀ ವಿಶ್ವದಾದ್ಯಂತ ಸುದ್ದಿಯಾಗಿದ್ದ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿನ ರಸನಾ ಗ್ರಾಮದಲ್ಲಿ ಎಂಟರ ಹರೆಯದ ಬಾಲಕಿಯನ್ನು ಅಪಹರಿಸಿ, ಮಾದಕ ಪದಾರ್ಥ ನೀಡಿ, ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರಗೈದು ಕೊನೆಗೆ ತಲೆ ಮೇಲೆ ಕಲ್ಲು ಹಾಕಿ ಕೊಂದು ಹಾಕಿದ್ದ  ಘಟನೆಯಲ್ಲಿನ ಆರೋಪಿಗಳನ್ನು ಬೆಂಬಲಿಸಿ ‘ಹಿಂದೂ ಏಕ್ತಾ ಮಂಚ್’ ಎಂಬ ಸಮಾಜ ವಿರೋಧಿ ಸಂಘಟನೆ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು, ಅತ್ಯಾಚಾರಿಗಳ ಪರ ವಹಿಸಿ ಮಾತನಾಡಿದ್ದ ಕಥುವಾ ಶಾಸಕ ರಾಜೀವ್ ಜಸ್ರೋತಿಯಾ, ಜಮ್ಮು ಕಾಶ್ಮೀರದ ಸಂಪುಟದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾನೆ.  ದೇಶವಾಳುತ್ತಿರುವ ಬಿಜೆಪಿ, ಅತ್ಯಾಚಾರಿಗಳ ಹಾಗೂ ಕ್ರಿಮಿನಲ್ ಗಳ ಪರ ಎನ್ನುವ ಸಂದೇಶ ಇದರಿಂದ ವ್ಯಕ್ತವಾಗಿದೆ ಎಂದು ದೇಶದಾದ್ಯಂತ ಈ ಕುರಿತು ವಿರೋಧಗಳು ವ್ಯಕ್ತವಾಗುತ್ತಿದೆ..

ಕಥುವಾದಲ್ಲಿ ಬಾಲಕಿಯನ್ನು ಅತ್ಯಾಚಾರಗೈದು ಕೊಂದು ಹಾಕಿದ್ದ ಘಟನೆ ಬೆಳಕಿಗೆ ಬಂದ ನಂತರ ಆರೋಪಿಗಳನ್ನು ಬಂಧಿಸಿದಾಗ, ಅವರನ್ನು ಈ ಘಟನೆಯಲ್ಲಿ ಸಿಲುಕಿಸಲಾಗಿದೆ ಎಂದು, ಅವರ ಬಂಧನದ ವಿರುದ್ಧ ‘ಹಿಂದೂ ಏಕ್ತ ಮಂಚ್’  ಎನ್ನುವ ಸಮಾಜ ವಿರೋಧಿ ಸಂಘಟನೆ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಬಿಜೆಪಿಯವರಾದ ರಾಜ್ಯ ಅರಣ್ಯ ಮಂತ್ರಿ ಚೌಧರಿ ಲಾಲ್ ಸಿಂಗ್,  ವಾಣಿಜ್ಯ ಮಂತ್ರಿ ಚಂದರ್ ಪ್ರಕಾಶ್ ಗಂಗಾ ಹಾಗೂ ಕಥುವಾ ಶಾಸಕನಾಗಿದ್ದ ರಾಜೀವ್ ಜಸ್ರೋತಿಯಾ ಪಾಲ್ಗೊಂಡು, ಅತ್ಯಾಚಾರಿಗಳ ಪರ ವಹಿಸಿ ಮಾತನಾಡಿದ್ದರು. ಇದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿ, ಕೊನೆಯಲ್ಲಿ ಮಂತ್ರಿಗಳಿಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದರು. ಈಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕನನ್ನು ಮಂತ್ರಿಯಾಗಿಸಿದ್ದು, ಮಂತ್ರಿಗಳು ರಾಜೀನಾಮೆ ನೀಡಿದ್ದರ ಹಿಂದಿರುವ ನೈತಿಕತೆಯನ್ನೇ ಪ್ರಶ್ನಿಸುವಂತಾಗಿದೆ. ಒಟ್ಟಿನಲ್ಲಿ ಅತ್ಯಾಚಾರಿಗಳ ಹಾಗೂ ಕ್ರಿಮಿನಲ್ ಗಳ ಪರವಾಗಿ ಬಿಜೆಪಿಯ ಮೃದು ನೀತಿ ಇದರಿಂದ ಬಹಿರಂಗಗೊಂಡಂತಾಗಿದೆ ಎಂದು ಸಂತ್ರಸ್ತೆ ಪರವಾಗಿರುವ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ತಾಲಿಬ್ ಹುಸ್ಸೈನ್ ಟಿವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group